ಜು. 16: ಸುಳ್ಯ ತಾಲೂಕು ಮರಾಟಿ ಬಾಂಧವರ ಕ್ರೀಡಾಕೂಟ

0

ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಮರಾಟಿ ಸಮಾಜ ಬಾಂಧವರಿಗಾಗಿ ಕ್ರೀಡಾಕೂಟ ಜು. 16 ರಂದು ಬೆಳಿಗ್ಗೆ 9.00 ಗಂಟೆಯಿಂದ ನಡೆಯಲಿದೆ. ಪುರುಷರಿಗೆ ಹಾಗೂ ಮಹಿಳೆಯರಿಗೆ, ಅಂಗನವಾಡಿ ಪುಟಾಣಿಗಳಿಗೆ, 1ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ. ವಿಜೇತರಿಗೆ ಬಹುಮಾನವನ್ನು ಜು. 23ರಂದು ಸಂಘದ ಮಹಾಸಭೆಯಲ್ಲಿ ನೀಡಲಾಗುವುದು ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.