ಬಾಳುಗೋಡು ಗ್ರಾಮದ ಪೊಯ್ಯೆಮಜಲು ನಿವಾಸಿ ಪೆರುಮುಂಡ ಹೊನ್ನಪ್ಪ ಗೌಡ – ಕುಸುಮಾವತಿ ದಂಪತಿಯ ಪುತ್ರಿ ಕು.ಆಶ್ರಿತಾ ಪೊಯ್ಯೆಮಜಲು ರವರು ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಎರಡು ದಿನದ ಹಿಂದೆ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಆರಂಭಿಕ ಶಿಕ್ಷಣವನ್ನು ಬಾಳುಗೋಡು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಪೂರೈಸಿದ ಆಶ್ರಿತಾರವರು, ಪಿ.ಯು.ಶಿಕ್ಷಣ ವನ್ನು ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಓದಿದರು. ಪಿ.ಯು.ಸಿ. ಮುಗಿದ ಕೂಡಲೇ ಉಡುಪಿಯ ತ್ರಿಷಾ ಕೋಚಿಂಗ್ ಸಿ.ಎ. ಪರೀಕ್ಷೆಗೆ ಕೋಚಿಂಗ್ ಪಡೆಯತೊಡಗಿದ ಅವರು ಅದೇ ಸಂದರ್ಭ ಮಂಗಳೂರಿನ ಕೆನರಾ ಕಾಲೇಜ್ ನಲ್ಲಿ ಬಿ.ಕಾಂ. ಪದವಿ ಪೂರೈಸಿದರು.
ಬಳಿಕ ಮಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ವಾಮನ ಕಾಮತ್ ರವರ ಮಾರ್ಗದರ್ಶನದಲ್ಲಿ ಸಿ.ಎ. ತರಬೇತಿ ಪಡೆಯತೊಡಗಿದರು. ಜತೆಗೆ ಎಂ.ಆರ್.ಪಿ.ಎಲ್. ನಲ್ಲಿ ಇಂಡಸ್ಟ್ರಿಯಲ್ ಟ್ರೈನಿಂಗ್ ಕೂಡ ಪೂರೈಸಿದರು.
ಇದೀಗ ಅವರ ಸಿ.ಎ. ಪರೀಕ್ಷೆಯ ಫಲಿತಾಂಶ ಬಂದಿದ್ದು, ಉತ್ತಮ ಅಂಕ ಪಡೆದು ತೇರ್ಗಡೆಯಾಗಿದ್ದಾರೆ.