ಪಂಜದಿಂದ ಜಳಕದಹೊಳೆ ಬಳ್ಳಕ್ಕ ಗುತ್ತಿಗಾರು ಸಂಪರ್ಕಿಸುವ ರಸ್ತೆಯಲ್ಲಿ ಜಳಕದಹೊಳೆ ಸೇತುವೆ ಶಿಥಿಲ ಗೊಂಡಿದ್ದು ಅದರ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಸೇತುವೆ ಸಮೀಪ ಹೊಳೆಗೆ ಮಣ್ಣು ಹಾಕಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗಿತ್ತು.

ಎ.5 ರಂದು ಸಂಜೆ ಸುರಿದ ಭಾರಿ ಮಳೆಯಿಂದ ಹೊಳೆಯಲ್ಲಿ ನೀರು ಬಂದು ತಾತ್ಕಾಲಿಕ ರಸ್ತೆ ಕೊಚ್ಚಿ ಹೋಗಿದ್ದು ರಸ್ತೆ ಸಂಪರ್ಕ ಕಡಿತ ಗೊಂಡಿದೆ. ಸೇತುವೆ ಮೇಲೆ ವಾಹನ ಸಂಚಾರ ನಿಷೇಧಿಸಲಾಗಿದೆ. ಸಂಪರ್ಕ ಕಡಿತದ ಬಳಿಕ ಸೇತುವೆ ಮೇಲೆ ಕೆಲವರು ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾರೆ. ಇದೀಗ ಆ ಭಾಗದ ಜನರು ಸೇತುವೆ ಸಂಪರ್ಕವಿಲ್ಲದೆ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸೇತುವೆ ಕಾಮಗಾರಿ ಅದೆಷ್ಟು ಬೇಗ ಮುಗಿಸಿ ರಸ್ತೆ ಸಂಪರ್ಕ ಕಲ್ಪಿಸ ಬೇಕಾಗಿದೆ.