ಸುಳ್ಯ ತಾಲೂಕು ಆಸ್ಪತ್ರೆ ಇದರ ಅರೋಗ್ಯ ರಕ್ಷಾ ಸಮೀತಿ ಸಾಮಾನ್ಯ ಸಭೆ ಎ.೧ರಂದು ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಅರೋಗ್ಯ ರಕ್ಷಾ ಸಮೀತಿ ಸದಸ್ಯರಾದ ಶಹೀದ್ ಪಾರೆ, ಚಂದ್ರನ್ ಕೂಟೆಲ್, ಅಬ್ದುಲ್ ರಝಾಕ್, ರಾಧಾಕೃಷ್ಣ ಪಾರಿವಾರಕಾನ, ಸುರೇಶ್ ಕಾಮತ್, ಗಿರೀಶ್ ಪಡ್ದಂಬೈಲ್, ಸಂಜೀವ ಬಡ್ಡೆಕಲ್ಲು ಹಾಗೂ ತಾಲೂಕು ಆಸ್ಪತ್ರೆ ಆಡಳಿತ ಅಧಿಕಾರಿ ಡಾ. ಕರುಣಾಕರ ಮತ್ತು ಪ್ರಥಮ ದರ್ಜೆ ಸಹಾಯಕ ಕಾಂತಿ ಉಪಸ್ಥಿತರಿದ್ದರು.

ನಿರ್ಣಯಗಳು
ಆರೋಗ್ಯ ರಕ್ಷ ಸಮಿತಿಯ ಕಾರ್ಯಕಾರಿ ಸಭೆಯಲ್ಲಿ ಚರ್ಚೆಯಾದಂತೆ ಕಣ್ಣಿನ ಶಸ್ತ್ರಚಿಕಿತ್ಸಾ ಘಟಕಕ್ಕೆ ಹೊಸದಾಗಿ ಕಣ್ಣಿನ ಶಸ್ತ್ರಚಿಕಿತ್ಸಾ ಯಂತ್ರ ಖರೀದಿಯ ನಿರ್ಣಯದಂತೆ ಯಂತ್ರ ಖರೀದಿಯಾಗಿದ್ದು ಇದನ್ನು ಉದ್ಘಾ ಟನೆ ಮಾಡುವ ಪ್ರಸ್ತಾವನೆಯನ್ನು ಸಭೆಯಲ್ಲಿ ಇಟ್ಟಾಗ ಎ.೫ರಂದು ಉದ್ಘಾ ಟಿಸುದೆಂದು ತೀರ್ಮಾನಿಸಲಾಯಿತು.
ಡಾ.ರವಿಪ್ರಕಾಶ್ ಶಸ್ತ್ರಚಿಕಿತ್ಸಾ ತಜ್ಞರು ಇವರಿಗೆ ಶಸ್ತ್ರಚಿಕಿತ್ಸೆ ನಡೆಸಲು ಅನುಮತಿಗಾಗಿ ಸಭೆಯಲ್ಲಿ ಪ್ರಸ್ತಾಪಿಸಿದಾಗ ಸಾಮಾನ್ಯ ಸಭೆಯ ಅಧ್ಯಕ್ಷರು ಮತ್ತು ನಾಮನಿರ್ದೇಶಿಸಿತ ಸದಸ್ಯರು ರೋಗಿಗಳ ಹಿತದೃಷ್ಟಿಯಿಂದ ಅನುಮತಿಯನ್ನು ಅಂಗೀಕರಿಸಿದರು.
ಗ್ರೂಪ್ ಡಿ ನಾಗೇಶರವರು ಕಳೆದ ನಾಲ್ಕು ತಿಂಗಳಲ್ಲಿ ೫೦ದಿನ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಕಾರಣ ಕೇಳಿದರೆ ಸಂಬಳ ಆಗಿಲ್ಲವೆಂದು ಮಾಹಿತಿ ನೀಡುತ್ತಾರೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದಾಗ ಸಂಬಂಧಿಸಿದ ಹೊರಗುತ್ತಿಗೆ ಸಂಸ್ಥೆಗೆ ಬರೆಯುವುದೆಂದು ನಿರ್ಣಯಿಸಲಾಯಿತು ಹಾಗೂ ಸರಕಾರಕ್ಕೂ ಈ ಕುರಿತು ಮಾಹಿತಿಯನ್ನು ರವಾನೆ ಮಾಡುವುದು ಎಂದು ನಿರ್ಣಯ ಕೈಗೊಳ್ಳಲಾಯಿತು.
ಹೊರಗುತ್ತಿಗೆಯಡಿಯಲ್ಲಿ ಎಕ್ಸರೇ ತಂತ್ರಜ್ಞ ರ ನೇಮಕ ಅಂತಿಮಗೊಳಿಸುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸುತ್ತಾ ಬೆಳಿಗ್ಗೆ, ೯ರಿಂದ ಸಂಜೆ ೬ರವರೆಗೆ ಕೆಲಸ ನಿರ್ವಹಿಸುವುದು, ಸರಕಾರಿ ರಜೆದಿನಗಳಲಿ, ಕೆಲಸ ನಿರ್ವಹಣೆ ಮಾಡುವುದು. ವಾರದಲ್ಲಿ ಒಂದು ದಿನರಜೆ ನೀಡುವುದು ಸರಕಾರದ ನಿಯಮದಂತೆ ರೂ. ೧೫೪೭೨ ನಿಗದಿಗೊಳಿಸಬೇಕಾಗಿದ್ದು ಎಂದು ತಿಳಿಸಿದರು. ಎಕ್ಸರೇ ತಂತ್ರಜ್ಞರು ಕೆಲಸ ಬಿಡುವ ಮೊದಲ ಒಂದು ತಿಂಗಳ ನೋಟಿಸ್ ನೀಡುವುದು ಎಂದು ಸಭೆಯಲಿ ತೀರ್ಮಾನಿಸಲಾಯಿತು.
ರೋಗಿಗಳಿಗೆ ಆಹಾರವನ್ನು ಟ್ರಾಲಿ ಮೂಲಕ ಸರಬರಾಜು ಮಾಡಲು ಖರೀದಿಸಿದ ಮೌಲ್ಯ ಪಾವತಿಸಲು ಸಭೆಯಲ್ಲಿ ಮಂಡಿಸಿದಾಗ ಅಧ್ಯಕ್ಷರು ಸಿಬ್ಬಂದಿಗಳ ಕೊರತೆ ಇರುವುದರಿಂದ ಯಾವ ರೋಗಿಗಳಿಗೆ ನಡೆಯಲು ಸಾದ್ಯವಿಲ್ಲ ವೋ ಅಂತಹ ರೋಗಿಗಳಿಗೆ ಆಹಾರವನ್ನು ಸರಬರಾಜು ಮಾಡುವಂತೆ ಸೂಚಿಸಿದರು, ರೂ. ೧೬೦೪೮/- ನ್ನು ಪಾವತಿಸಲು ಸಭೆಯಲಿ ಅಂಗೀಕರಿಸಲಾಯಿತು
ಅಡಿಗೆಯವರು ತಮ್ಮನ್ನು ಅಡುಗೆ ಸಿಬ್ಬಂದಿಯಂತೆ ನಿರ್ಣಯಿಸಬೇಕೆಂದು ಕೋರಿದಾಗ ಹಾಗೆ ನೇಮಕಾತಿ ಮಾಡಲು ನಮ್ಮ ಹಂತದಲ್ಲಿ ಇರುವುದಿಲ್ಲ ಎಂದು ಸಭೆಯಲಿ ನೀರ್ಣಯಿಸಿ ಮುಂದೆ ಹೆಚ್ಚುವರಿ ಗ್ರೂಪ್ ಡಿ ನೇಮಕಕ್ಕೆ ಮೇಲಾಧಿಕಾರಿಗಳಿಗೆ ಬರೆಯುವುದು ಎಂದು ತೀರ್ಮಾನಿಸಲಾಯಿತು.
ವೀಲ್ ಚಯರ್(ಬ್ಯಾಟರಿ ಚಾಲಿತ) ಖರೀದಿಸುವ ಬಗ್ಗೆ ಸಭೆಯಲಿ, ಪ್ರಸ್ತಾಪವಾಗಿ ಎಂ.ಆರ್.ಪಿ.ಎಲ್. ನವರಿಗೆ ಬರೆಯುವುದೆಂದು ತೀರ್ಮಾನಿಸಲಾಯಿತು, ಬೆಡ್ ಮತ್ತು ಬೆಡ್ ಶೀಟ್ ಗಳನ್ನು ಸರಿಪಡಿಸುವಂತೆ ಸದಸ್ಯರು ಸಭೆಯ ಪ್ರಸ್ತಾಪವಾಗಿ ಸರಿಪಡಿಸುವುದಾಗಿ ನಿರ್ಧರಿಸಲಾಯಿತು.
ಹಳೆಯ ಶವಗಾರ ಶಿಥಿಲ ಅವಸ್ಥೆಯಲ್ಲಿ ಇರುವುದರಿಂದ ಹೊಸದಾಗಿ ನಿರ್ಮಿಸಿರುವ ಶವಗಾರವನ್ನು ನಿರ್ಮಿಸಿರುವ ಶವಾಗಾರವನ್ನು ಹಸ್ತಾಂತರರಿಸುವಂತೆ ಇಲಾಖೆಗೆ ಬರೆಯಲು ತೀರ್ಮಾನಿಸಲಾಯಿತು.
ನಗು-ಮಗು ಅಂಬುಲೆನ್ಸ್ ಹೊಸದಾಗಿ ಖರೀದಿಸಲು ಪ್ರಸ್ತಾವನೆ ಸಲ್ಲಿಸಲು
ಆಡಳಿತ ವೈದ್ಯಾಧಿಕಾರಿಗಳು ಕ್ರಮಕೈಗೂಳ್ಳುವಂತೆ ಸಭೆಯಲ್ಲಿ ನಿರ್ಣಾಯಿಸಲಾಗಿದೆ.
ಆಸ್ಪತ್ರೆಯ ಮುಂಭಾಗ ಇಂಟರ್ ಲಾಕ್ ಕಾಮಗಾರಿ ನೆಡೆಸಲಾಗಿದ್ದು ಸುಮಾರು ೨೦೦ಚದರ ಅಡಿಗಳಷ್ಟು ಬಾಕಿ ಇದ್ದು ಆರೋಗ್ಯ ರಕ್ಷ ಸಮಿತಿಯಿಂದ ನೆಡೆಸುವುದಾಗಿ ನಿರ್ಣಯಿಸಲಾಯಿತು.
೧೦೮ ಟಯರ್ ಹಾಕುವುದು ಮತ್ತು ಸಿಬ್ಬಂದಿಗಳಿಗೆ ರೂಮ್ ವ್ಯವಸ್ಥೆಯ ಬಗ್ಗೆ, ಸದಸ್ಯರು ಗಮನ ಸೆಳೆದಾಗ ಅದು ತಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ. ವಾದುದರಿಂದ ಟಯರನ್ನು ಸಂಬಂಧಿತ ಸಂಸ್ಥೆಯವರೇ ಒದಗಿಸಬೇಕು ಹಾಗೂ ಸಿಬ್ಬಂದಿಗಳಿಗೆ ವಸತಿ ವ್ಯವಸ್ಥೆ ಮಾಡುವ ಕುರಿತು ಸಭೆಯಲಿ ತೀರ್ಮಾನಿಸಲಾಯಿತು,
ಕ್ಯಾಂಟೀನ್ ಗೆ ಹೊಸದಾಗಿ ಟೆಂಡರ್ ಕರೆಯುವ ಬಗ್ಗೆ ಸಭೆಯಲಿ ಪ್ರಸ್ತಾಪವಾಗಿ ಸರಕಾರದ ನಿಯಮದಂತೆ ಕ್ಯಾಂಟೀನ್ ಗೆ ನೀರು, ವಿದ್ಯುತ್, ಬಾಡಿಗೆ ರಹಿತ ಕೊಠಡಿ ವ್ಯವಸ್ಥೆ ನೀಡಿರುವುದರಿಂದ ಆಸ್ಪತ್ರೆಯ ಸಿಬ್ಬಂದಿ ಹಾಗೂ ಬಡರೋಗಿಗಳಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸುವಂತೆ ಸಭೆಯಲ್ಲಿ ಷರತ್ತು ವಿಧಿಸಲು ತೀರ್ಮಾನಿಸಲಾಯಿತು. ಕ್ಯಾಂಟೀನ್ ಸ್ಥಳಾಂತರ ಬಗ್ಗೆ, ಇಂಜಿನಿಯರ್ ಗಳಿಗೆ ಬರೆದು ಅದರ ತೀರ್ಮಾನದಂತೆ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿ ಪಾರ್ಕಿಂಗ್ ವ್ಯವಸ್ಥೆ ಮಾಡುವುದು ಎಂದು ತೀರ್ಮಾನಿಸಲಾಯಿತು.
ಗ್ರೂಪ್ ಡಿ ಸಂಬಳ ೫ನೇ ತಾರೀಕುನಂದು ಬರುವಂತೆ ಹಾಗೂ ಅಡುಗೆ ಸಿಬ್ಬಂದಿಗೆ ಹೆಚ್ಚುವರಿ ಹಣವನ್ನು ಪಾವತಿಸುವಂತೆ (ನಿಯಮಾನುಸಾರ) ಸಭೆಯಲಿ ತಿರ್ಮಾನಿಸಿದರು..
. ಪಥ್ಯಾಹಾರ ಸರಬರಾಜು ಮಾಡುವ ಸಂಸ್ಥೆಯವರು ಸರಿಯಾಗಿ ವಸ್ತುಗಳನ್ನು ಸರಬರಾಜು ಮಾಡುತ್ತಿಲ್ಲ ಅದುದರಿಂದ ಸರಿಯಾಗಿ ಸರಬರಾಜು ಮಾಡುವಂತೆ ಪತ್ರ ಬರೆಯುವುದಾಗಿ ನಿರ್ಣಯಿಸಲಾಯಿತು.
ಡಯಾಲಿಸಿಸ್ ರೋಗಿಗಳು ಹೆಚ್ಚಿದಲ್ಲಿ, ಬೇರೆ ವಾರ್ಡ್ ವ್ಯವಸ್ಥೆ ಮಾಡುವಂತೆ ಅಧ್ಯಕ್ಷರು ಸೂಚಿಸಿದರು.
ಆಸ್ಪತ್ರೆ ಪಕ್ಕದ ಖಾಸಗಿ ನಿವೇಶನದಲ್ಲಿ, ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಆಸ್ಪತ್ರೆಯ ಜಾಗ ಅತಿಕ್ರಮವಾಗದಂತೆ ಕ್ರಮ ಕೈಗೊಳ್ಳುವ ಕುರಿತು ಚರ್ಚೆಗಳು ನಡೆಯಿತು.