ಕೇನ್ಯ ಶಾಲಾ ನೂತನ ಶೌಚಾಲಯ ಕಟ್ಟಡದ ಉದ್ಘಾಟನೆ

0

ಸ.ಕಿ.ಪ್ರಾ ಶಾಲೆ ಕೇನ್ಯ ಇಲ್ಲಿ ಮಂಗಳೂರು ರಿಫೈನರಿ ಮತ್ತು ಪೆಟ್ರೋಲ್ ಕೆಮಿಕಲ್ಸ್ ಲಿಮಿಟೆಡ್ ( MRPL) ವತಿಯಿಂದ ಬಿಡುಗಡೆಯಾದ 7 ಲಕ್ಷ ರೂಪಾಯಿ ಮೊತ್ತದ ಅನುದಾನದಿಂದ ಶಾಲಾ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಸುಳ್ಯ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೇನ್ಯ, ಎಸ್ ಡಿ ಎಂ ಸಿ ಕೇನ್ಯ ಇವರ ಸಹಯೋಗದೊಂದಿಗೆ ನಿರ್ಮಾಣಗೊಂಡಿರುವ ಶೌಚಾಲಯ ಕಟ್ಟಡವನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಕು|ಭಾಗೀರಥಿ ಮುರುಳ್ಯ ರವರು ಉದ್ಘಾಟಿಸಿದರು.

ಶೌಚಾಲಯವನ್ನು ಉತ್ತಮವಾಗಿ ಬಳಸಿಕೊಂಡು ಉತ್ತಮ ಆರೋಗ್ಯಕರ ಜೀವನವನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣದ ಮಹತ್ವ ಅರಿತು ಅಭ್ಯಾಸ ನಡೆಸಬೇಕು ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರ್ಷಿತ್ ಕಾರ್ಜ, ಉಪಾಧ್ಯಕ್ಷರಾದ ಶ್ರೀಮತಿ ಪಾರ್ವತಿ ಪಿ.ಡಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ವಾಸುದೇವ ಗೌಡ ಆನೆಮನೆ, ಉಪಾಧ್ಯಕ್ಷರಾದ ಶ್ರೀಮತಿ ಕೋಮಲಾಕ್ಷಿ ಕುಂಜತ್ತಾಡಿ, ಎಸ್.ಡಿ.ಎಂ.ಸಿ. ಸದಸ್ಯರುಗಳಾದ ಪದ್ಮನಾಭ ಕೆರೆಕ್ಕೋಡಿ , ಗೋಪಾಲಕೃಷ್ಣ ಕಾಪುತಮೂಲೆ, ಶಿವಾನಂದ ಮಜ್ಜಾರ್ ಕಡವು, ಶ್ರೀಮತಿ ಭವಾನಿ, ಶ್ರೀಮತಿ ಲೇಖಾ, ಶ್ರೀಮತಿ ವಿನುತಾ,ಶ್ರೀಮತಿ ಸವಿತಾ ಕೆ, ಶ್ರೀಮತಿ ಟೀನಾ ಸಿ, ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಮಮತಾ, ಆರೋಗ್ಯ ಕೇಂದ್ರದ ಸಿಬ್ಬಂದಿ ಕುಮಾರಿ ಪೃಥ್ವಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ ರೈ ಬಿರ್ಕಿ, ಕೃಷಿಪತ್ತಿನ ಸಹಕಾರಿ ಸಂಘ ಪಂಜ ಇದರ ನಿರ್ದೇಶಕರಾದ ವಾಸುದೇವ ಕೆರೆಕ್ಕೋಡಿ, ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪುಟ್ಟಣ್ಣ ಗೌಡ ಕುಂಜತ್ತಾಡಿ, ಶಾಲಾ ಶಿಕ್ಷಕಿಯರಾದ ಶ್ರೀಮತಿ ಸಂಗೀತ ಮತ್ತು ಕುಮಾರಿ ತುಲಶ್ರೀ ಪಿ ಹಾಗೂ ಪೋಷಕವೃಂದ ಮತ್ತು ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.

ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಪ್ರೇಮಾ ಜಗದೀಶ್ ಅಂಬೆಕಲ್ಲು ಸ್ವಾಗತಿಸಿದರು. ಮಾಜಿ ಗ್ರಾಮಪಂಚಾಯತ್ ಸದಸ್ಯರಾದ ತಾರಾ ರೈ ಬಿರ್ಕಿ ವಂದಿಸಿದರು.