ಆಲೆಟ್ಟಿ ತಿರುವಿನಲ್ಲಿ ಧರಶಾಯಿಯಾದ ಮರದ ತೆರವು ಕಾರ್ಯವನ್ನು ಸುಳ್ಯದ ಅಗ್ನಿ ಶಾಮಕ ದಳದ ಸಿಬ್ಬಂದಿಯವರ ಹಾಗೂ ಸ್ಥಳೀಯರ ಸಹಕಾರದಲ್ಲಿ ರಾತ್ರಿ ಸಮಯದಲ್ಲಿ ತೆರವುಗೊಳಿಸಲಾಯಿತು.
ಮೆಷಿನ್ ಬಳಸಿ ರಸ್ತೆಯ ಮೇಲೆ ಇದ್ದ ಮರವನ್ನು ಕತ್ತರಿಸಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಸಂಜೆ ಸುಮಾರು 7.30 ರ ಹೊತ್ತಿಗೆ ಬಿದ್ದ ಮರವನ್ನು 9.30 ರ ಹೊತ್ತಿಗೆ ತೆರವು ಮಾಡಲಾಯಿತು. ವಿದ್ಯುತ್ ಕಂಬಗಳು ರಸ್ತೆಯಲ್ಲಿ ಅಡ್ಡಲಾಗಿ ಬಿದ್ದು ಹೆಚ್.ಟಿ.ಲೈನ್ ನ ತಂತಿಗಳು ತುಂಡಾಗಿ ರಸ್ತೆಗೆ ಬಿದ್ದಿತ್ತು.
ಮೆಸ್ಕಾಂ ಇಲಾಖೆಗೆ ಸ್ಥಳೀಯ ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿಗಳು ವಿಷಯ ತಿಳಿಸಿದರೂ ಮರ ತೆರವು ಮಾಡುವ ತನಕ ಬಾರದೆ ನಿರ್ಲಕ್ಷ್ಯ ವಹಿಸಿದ ಬಗ್ಗೆ ನಾಗರಿಕರು ಆಕ್ರೋಶವ್ಯಕ್ತಪಡಿಸಿದರು. ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡು ಆಲೆಟ್ಟಿ ಪ್ರದೇಶದಲ್ಲಿರುವ ಜನರು ಕತ್ತಲಿನಲ್ಲಿ ಕಳೆಯುವಂತಾಗಿದೆ.