ಯೋಗಾಸನ ಚಾಂಪಿಯನ್ ಶಿಪ್ : ತನ್ವಿ ಚಿಕ್ಮುಳಿಗೆ ತೃತೀಯ ಸ್ಥಾನ

0

9 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಜುಲೈ 9 ರಂದು ನಡೆದ ಯೋಗಾಸನ ಚಾಂಪಿಯನ್ ಶಿಪ್ ನ 12 ರಿಂದ 15 ವರ್ಷದ ಒಳಗಿನ ಬಾಲಕಿಯರ
ವಿಭಾಗದಲ್ಲಿ ನಿರಂತರ ಯೋಗ ಕೇಂದ್ರ ಪಂಜದ ವಿದ್ಯಾರ್ಥಿನಿ ತನ್ವಿ. ಎಂ.ಜಿ. ತೃತೀಯ ಸ್ಥಾನಗಳಿಸಿದ್ದಾರೆ.

ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ
ಇವರಿಗೆ ಯೋಗ ಗುರು ಶರತ್ ಮರ್ಗಿಲಡ್ಕರವರು ಮಾರ್ಗದರ್ಶನ ನೀಡಿದ್ದಾರೆ.

ಈಕೆ ಗುತ್ತಿಗಾರು ಗ್ರಾಮದ ಚಿಕ್ಮುಳಿ ಗೋಪಾಲಕೃಷ್ಣ ಮತ್ತು ಕವಿತಾ ದಂಪತಿಯ ಪುತ್ರಿ.