ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿ: ಶಾಲಾ ಆಟದ ಮೈದಾನ ವಿರೂಪ

0

ಗುತ್ತಿಗಾರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೂತನ ಕಟ್ಟಡ ಕಾಮಗಾರಿ ನಡೆಯುತ್ತಿದ್ದು ಇದರಿಂದಾಗಿ ಗುತ್ತಿಗಾರು ಮಾ.ಹಿ.ಪ್ರಾ ಶಾಲಾ ಮೈದಾನ ವಿರೂಪವಾದ ಘಟನೆ ವರದಿಯಾಗಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಬದಿ ಸಕಲ ವ್ಯವಸ್ಥೆಗಳನ್ನು ಒಳಗೊಂಡ ನೂತನ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ. ಇದಕ್ಕಾಗಿ ಕಾಮಗಾರಿಗೆ ಸಂಬಂಧಿಸಿದ ವಾಹನಗಳು ಪ್ರಾಥಮಿಕ ಶಾಲೆಯ ಮೈದಾನವನ್ನು ಬಳಸುತ್ತಿವೆ. ಇದಕ್ಕಾಗಿ ಮರಳು, ಕಲ್ಲು, ಸಿಮೆಂಟ್ ಮತ್ತಿತರರ ಲೋಡ್ ಇಳಿಸಲು ಶಾಲಾ ಮೈದಾನ ಬಳಸಲಾಗಿತ್ತು. ಆದರೀಗ ಮಳೆಗಾಲವೂ ಇದ್ದು ವಾಹನಗಳು ಮೈದಾನದಲ್ಲಿ ಓಡಾಡುತ್ತಿರುವ ಕಾರಣ ಶಾಲಾ ಮೈದಾನದ ಒಂದು ಪಾರ್ಶ್ವ ವಿರೂಪವಾಗಿದ್ದು ವಾಹನ ಓಡಾಡಿ ಮಣ್ಣು ತುಂಬಿದ್ದು ನೀರು ನಿಂತಿದೆ. ಶಾಲಾ ಮೈದಾನ ಸಮತಟ್ಟಾದ್ದು ಹೊಂಡದಂತಾಗಿದೆ. ಇದರಿಂದಾಗಿ ಶಾಲೆಯ ಮೈದಾನದ ಒಂದು ಪಾರ್ಶ್ವ ಸಂಪೂರ್ಣ ನೀರು ನಿಂತಿದ್ದು ಶಾಲಾ ಮೈದಾನ ವಿರೂಪವಾಗಿದೆ. ಸದಾ ನೀರು ನಿಲ್ಲುವಂತಾಗಿದೆ . ಇದಕ್ಕೆ ಶಾಲೆಯವರು ಆಕ್ಷೇಪವನ್ನು ಎತ್ತಿರುವುದು ಗೊತ್ತಾಗಿದೆ. ಈ ಬಗ್ಗೆ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ನಂದಕುಮಾರ್ ಅವರನ್ನು ಕೇಳಿದಾಗ ಕಟ್ಟಡ ಕಾಮಗಾರಿ ಕೆಲವೇ ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು ಪೂರ್ಣಗೊಂಡ ತಕ್ಷಣ ಶಾಲಾ ಮೈದಾನವನ್ನು ಮೊದಲಿನಂತೆ ಸಮತಟ್ಟುಗೊಳಿಸಿ ಯಾವುದೇ ತೊಂದರೆ ಆಗದಂತೆ ಮಾಡಿಕೊಡಲಾಗುವುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.