ಕ್ಯಾಂಪ್ಕೋ ಸಂಸ್ಥೆಯಿಂದ ದಿ.ನವೀನ್ ರೈ ಮೇನಾಲರವರ ಪತ್ನಿ ಶ್ರೀಮತಿ ರೂಪ ಎನ್.ರೈಯವರಿಗೆ ಚೆಕ್ ಹಸ್ತಾಂತರ

0

ಕ್ಯಾಂಪ್ಕೋ ಸಂಸ್ಥೆ , ಮಂಗಳೂರು ಇದರ ವತಿಯಿಂದ “ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ”.ಎಂಬ ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಸಂಸ್ಥೆಯ ಸಕ್ರಿಯ ಸದಸ್ಯರಾದ ನವೀನ್ ರೈ ಮೇನಾಲ ಸುಳ್ಯರವರ ಆಕಸ್ಮಿಕ ಮರಣ ಪರಿಹಾರವಾಗಿ ಕ್ಯಾಂಪ್ಕೋ ವತಿಯಿಂದ ನೀಡಲಾಗುವ ರೂ. 50,000/- ದ ಚೆಕ್ ನ್ನು ಸಂಸ್ಥೆಯ ನಿರ್ದೇಶಕರಾದ ಕೃಷ್ಣ ಪ್ರಸಾದ್ ಮಡ್ತಿಲರವರು ದಿ. ನವೀನ್ ರೈ ಮೇನಾಲರವರ ಪತ್ನಿ ಶ್ರೀಮತಿ ರೂಪ ಎನ್ ರೈ ಅವರಿಗೆ ಅವರ ನಿವಾಸದಲ್ಲಿ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಕ್ಯಾಂಪ್ಕೋ ಸಂಸ್ಥೆಯ ಸದಸ್ಯರುಗಳಾದ ನಯನ್ ರೈ , ಸಂಪತ್ ಶೆಟ್ಟಿ, ಕ್ಯಾಂಪ್ಕೋ ಸುಳ್ಯ ಶಾಖಾಧಿಕಾರಿ ಕುಂಞoಬು ಹಾಗೂ ಸಿಬ್ಬಂದಿ ಮಲ್ಲಿಕಾ ಅವರು ಉಪಸ್ಥಿತರಿದ್ದರು.