ಸುಳ್ಯ ಶಾಸಕರಿಗೆ ವಿ.ಹಿಂ.ಪ, ಹಿಂ.ಜಾ.ವೇ ಹಾಗೂ ಭಜರಂಗದಳ ಮನವಿ
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ
ಕಾಯಿದೆ 2020 ರ ಬಗ್ಗೆ ವಿಧಾನಸಭೆ/ವಿಧಾನ ಪರಿಷತ್ ನಲ್ಲಿ ಚರ್ಚೆಗೆ ಬಂದಲ್ಲಿ ರಾಜ್ಯದ ರೈತರ ಹಾಗೂ ಪ್ರಜೆಗಳ ಆರೋಗ್ಯದ ಹಾಗೂ ದೇಶದ ಆರ್ಥಿಕತೆಯ ಹಿತದೃಷ್ಟಿಯಿಂದ ಈ ಕಾಯ್ದೆಯ ಅಗತ್ಯತೆಗಳ ಬಗ್ಗೆ ತಾವು ಸಮರ್ಥಿಸಬೇಕಾಗಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರಿಗೆ ವಿಶ್ವ ಹಿಂದೂ ಪರಿಷತ್, ಹಿಂದೂಜಾಗರಣ ವೇದಿಕೆ ಹಾಗೂ ಭಜರಂಗದಳದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.
ಹಾಗೂ ಕರ್ನಾಟಕದಲ್ಲಿ ಪ್ರಜೆಗಳ ಒಳಗಿನ ಸಾಮರಸ್ಯ ಕ್ಕಾಗಿ ಹಾಗೂ ಶಾಂತಿ ಸೌಹಾರ್ದಕ್ಕಾಗಿ ಬಾಳಲು ಕರ್ನಾಟಕ ಧಾರ್ಮಿಕ ಹಕ್ಕು ಸ್ವಾತಂತ್ರ್ಯ ಕಾಯ್ದೆ 2022 ನ್ನು ಹಿಂಪಡೆಯದಂತೆ ಹಾಗೂ ದುರ್ಬಲಗೊಳಿಸದಂತೆ ಬಲವಾಗಿ ಸಮರ್ಥಿಸಬೇಕಾಗಿ ಅವರು ಮನವಿಯಲ್ಲಿ ವಿನಂತಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಬಜರಂಗದಳ ಸಂಚಾಲಕ ಹರಿಪ್ರಸಾದ ಎಲಿಮಲೆ, ಜಿಲ್ಲಾ ಸಹ ಸಂಚಾಲಕ ಲತೀಶ್ ಗುಂಡ್ಯ, ಮಹೇಶ್ ರೈ ಮೇನಾಲ, ಜಾಗರಣೆ ವೇದಿಕೆ ತಾಲೂಕು ಸಂಚಾಲಕ ಮಹೇಶ್ ಉಗ್ರಾಣಿಮನೆ, ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ರಂಜಿತ್, ಬಜರಂಗದಳ ಸಹ ಸಂಚಾಲಕ ನವೀನ್ ಎಲಿಮಲೆ, ಸಂದೀಪ್ ಎಲಿಮಲೆ, ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ಬಾನುಪ್ರಕಾಶ್ ಪೆರುಮುಂಡ, ನಗರ ಸಂಚಾಲಕ ವರ್ಷಿತ್ ಚೊಕ್ಕಾಡಿ, ಜಾಗರಣ ವೇದಿಕೆ ನವೀನ್ ಯಾವಟೆ, ಪ್ರೇರಣ್ ರಾವ್ ಉಪಸ್ಥಿತರಿದ್ದರು.