ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಯೋಗೇನ ಚಿತ್ತಸ್ಯ ಯೋಗ ಕೇಂದ್ರಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿ

0

ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಜು. 9 ರಂದು ನಡೆದ ಮುಕ್ತ ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಯೋಗೇನ ಚಿತ್ತಸ್ಯ ಯೋಗ ಕೇಂದ್ರಕ್ಕೆ ಹಲವು ಪ್ರಶಸ್ತಿ ಲಭಿಸಿದೆ.

9 ರಿಂದ 12 ನೇ ವಯೋಮಾನದ ಬಾಲಕಿಯರ ಟ್ರೆಡಿಷನಲ್ ವಿಭಾಗದಲ್ಲಿ ಸೋನಾ ಅಡ್ಕಾರ್ ಪ್ರಥಮ ಸ್ಥಾನ ಇವರು ಶರತ್ ಅಡ್ಕಾರ್ ಹಾಗೂ ಶೋಭಾಕುಮಾರಿ ದಂಪತಿಗಳ ಪುತ್ರಿ, ಹಾರ್ದಿಕ ಕೆರೆಕ್ಕೋಡಿ 7ನೇ ಸ್ಥಾನ ಹಾಗೂ ಸ್ವಂತ ಆಯ್ಕೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ ಇವರು ಕೃಷ್ಣಪ್ಪ ಹಾಗೂ ಪುಷ್ಪಾವತಿ ದಂಪತಿಗಳ ಪುತ್ರಿ.


9 ರಿಂದ 12 ವಯೋಮಾನದ ಬಾಲಕರ ಟ್ರೆಡಿಷನಲ್ ವಿಭಾಗದಲ್ಲಿ ತನುಷ್ ಎಂ ಹೆಚ್ ತೃತೀಯ ಸ್ಥಾನ ಇವರು ಹರೀಶ್ ಮೋಂಟಡ್ಕ ಹಾಗೂ ಭವಾನಿ ದಂಪತಿಗಳ ಪುತ್ರ. 12 ರಿಂದ 15ನೇ ವಯೋಮಾನದ ಬಾಲಕರ ಟ್ರೆಡಿಷನಲ್ ವಿಭಾಗದಲ್ಲಿ ತನುಷ್ ಕೆ ಆರ್ 5 ನೇ ‍ಸ್ಥಾನ ಇವರು ರವಿ ಹಾಗೂ ಪ್ರಜ್ಞ ದಂಪತಿಗಳ ಪುತ್ರ.

ಸ್ನೇಹಮಯಿ ಯೋಗ ಆಚಾರ್ಯ ಪ್ರಶಸ್ತಿ ಪುರಸ್ಕೃತ ಯೋಗಗುರು ಸಂತೋಷ್ ಮುಂಡಕಜೆ ಯವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುತ್ತಾರೆ.