ಕೊಲ್ಲಮೊಗ್ರು: ಮಳೆಗೆ ಸಾರ್ವಜನಿಕ ಬಾವಿಯ ಕಟ್ಟೆ ಕುಸಿತ

0

ಸಂಭಾವ್ಯ ಅಪಾಯ ತಪ್ಪಿಸಲು ತಾತ್ಕಾಲಿಕ ತಡೆ ನಿರ್ಮಾಣ

ಕೊಲ್ಲಮೊಗ್ರುದಲ್ಲಿ ಸಾರ್ವಜನಿಕ ಬಾವಿಯ ಕಟ್ಟೆ ಇತ್ತೀಚಿನ ಮಳೆಗೆ ಬಾವಿಯೊಳಗೆ ಮುರಿದು ಬಿದ್ದಿದ್ದೆ. ಸಂಭಾವ್ಯ ಅಪಾಯವನ್ನು ತಪ್ಪಿಸಲು ತಾತ್ಕಾಲಿಕ ತಡೆಯನ್ನು ನಿರ್ಮಿಸಲಾಯಿತು.

ಪಶು ವೈದ್ಯಕೀಯ ಆಸ್ಪತ್ರೆ ಬಳಿ ಇದ್ದ ಸಾರ್ವಜನಿಕ ಬಾವಿಯ ಕಟ್ಟೆ ಭಾರಿ ಮಳೆಗೆ ಒಡೆದು ಬಾವಿಯೊಳಗೆ ಬಿದ್ದಿತ್ತು.
ಗ್ರಾಮ ಪಂಚಾಯತ್ ನಿರ್ದೇಶನದ ಮೇರೆಗೆ ಮಾದವ ಚಾಂತಾಲ ಮತ್ತಿತರರು ಸೇರಿ ಬಾವಿಯ ಸುತ್ತ ಮಣ್ಣು ಸುರಿದು ತಾತ್ಕಾಲಿಕ ತಡೆ ನಿರ್ಮಿಸಿದರು.