ಅಕ್ಷರ ದಾಸೋಹ ಸಿಬ್ಬಂದಿಗಳಿಂದ ಸುಳ್ಯದಲ್ಲಿ ಪ್ರತಿಭಟನೆ
ನಮ್ಮ ಪ್ರತಿಭಟನೆಯ ಫಲವಾಗಿ ಹಿಂದಿನ ಸರಕಾರ ಗೌರವಧನವನ್ನು ಹೆಚ್ಚುವರಿ 1 ಸಾವಿರ ವೇತನ ಘೋಷಣೆ ಮಾಡಿದ್ದ ಸರಕಾರ ಇನ್ನೂ ಅದನ್ನು ಅಡುಗೆ ಸಿಬ್ಬಂದಿಗಳಿಗೆ ನೀಡಿಲ್ಲ. ಈಗಿನ ಸರಕಾರ ವೇತನವನ್ನು ಶೀಘ್ರವೇ ಕೊಡಬೇಕೆಂದು ನಾವು ಆಗ್ರಹಿಸುತ್ತೇವೆ ಎಂದು ಸಿಐಟಿಯು ಮುಖಂಡ ರಾಬರ್ಟ್ ಡಿ ಸೋಜಾ ಹೇಳಿದರು.
ಘೋಷಣೆ ಮಾಡಿದ ವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಅಕ್ಷರ ದಾಸೋಹ ಸಿಬ್ಬಂದಿಗಳು ಸುಳ್ಯ ತಾಲೂಕು ಪಂಚಾಯತ್ ಎದುರುಗಡೆ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ ದವರೆಗೆ ಶಾಲೆಯಲ್ಲಿ ಕೇವಲ 150 ರೂ ಗೆ ಸಿಬ್ಬಂದಿಗಳು ದುಡಿಯುತ್ತಾರೆ. ಆದರೆ ಅದೇ ಶಾಲೆಯ ಶಿಕ್ಷಕರಿಗೆ ದಿನಕ್ಕೆ ಸಾವಿರಕ್ಕೂ ಅಧಿಕ ಸಂಬಳ, ಕ್ಷೇತ್ರದ ಶಾಸಕರಿಗೆ ತಿಂಗಳಿಗೆ ಎಲ್ಲವೂ ಸೇರಿ 3 ಲಕ್ಷ ದಷ್ಟು ಸಂಬಳ ಸಿಗುತ್ತದೆ. ಯಾಕೆ ಈ ತಾರತಮ್ಯ. ಅಕ್ಷರ ದಾಸೋಹ ಸಿಬ್ಬಂದಿಗಳು ಬದುಕೋದು ಬೇಡವೇ?. ಆದ್ದರಿಂದ ಸರಕಾರ ಈಗ ನೀಡುವ ಗೌರವಧನ ಹೆಚ್ಚಳ ಮಾಡಬೇಕು.ಅಕ್ಷರ ದಾಸೋಹ ಸಿಬ್ಬಂದಿಗಳು ಕೂಡಾ ಸ್ವಾಭಿಮಾನದ ಬದುಕು ನಡೆಸುಂತಾಗಬೇಕು ಎಂದು ಅವರು ಆಗ್ರಹಿಸಿದರು.
ಅಡಿಗೆ ಸಿಬ್ಬಂದಿಗಳಿಗೆ ಕನಿಷ್ಟ 12 ಸಾವಿರ ವೇತನ ನಿಗದಿಯಾಗಬೇಕು. ಏಕಾಏಕಿ ಕೆಲಸದಿಂದ ಬಿಡಬಾರದು. ನಿವೃತ್ತರಾದಾಗ ಭದ್ರತೆ ನೀಡಬೇಕು. ಬಿಸಿಯೂಟ ಖಾಸಗೀಕರಣ ಮಾಡಬಾರದು, ಪ್ರತೀ ಶಾಲೆಯಲ್ಲಿ ಕನಿಷ್ಟ ಎರಡು ಅಡುಗೆಯವರು ಬೇಕೇ ಬೇಕು ಇತ್ಯಾದಿ ಬೇಡಿಕೆ ಮುಂದಿಟ್ಟರು.
ಸಂಘದ ಅಧ್ಯಕ್ಷೆ ಲೀಲಾವತಿ ಅಲೆಕ್ಕಾಡಿ, ಪ್ರಧಾನ ಕಾರ್ಯದರ್ಶಿ ಲೀಲಾವತಿ ಸೂರ್ತಿಲ, ಉಪಾಧ್ಯಕ್ಷ ರಾದ ವಿಜಯಲಕ್ಷ್ಮಿ, ಸುನೀತಾ ಎಲಿಮಲೆ, ಭವ್ಯ ಎಡಮಂಗಲ, ಕಾರ್ಯದರ್ಶಿ ಸುಮಿತ್ರ, ಜತೆ ಕಾರ್ಯದರ್ಶಿ ಲತಾ ಪದವು, ಕುಸುಮಾ, ಸಾವಿತ್ರಿ ಕರಿಂಬಿಲ, ಖಜಾಂಜಿ ಪುಷ್ಪ ಕಲ್ಮಡ್ಕ, ಹೇಮಾವತಿ ಬೆಳ್ಳಾರೆ, ಗಿರಿಜಾ, ಜಾನಕಿ,, ಹತಿಣಾಕ್ಷಿ, ಚಂದ್ರಾವತಿ, ಹರಿಣಾಕ್ಷಿಬೆಳ್ಳಾರೆ, ಜಾನಕಿ ಪೆತ್ತಾಜೆ ಮೊದಲಾದವರು ಇದ್ದರು.