ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಕಷಾಯ ವಿತರಣಾ ಕಾರ್ಯಕ್ರಮವು ಜು.11 ರಂದು ಜರಗಿತು. ಕಷಾಯ ವಿತರಣೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆಯವರು ಮಾತನಾಡಿ ಶಾಲೆಯಲ್ಲಿ ಕೊಡಮಾಡುವ ಕಷಾಯದ ಮಹತ್ವದ ಬಗ್ಗೆ ವಿವರಿಸುತ್ತಾ “ಸ್ನೇಹ ಶಾಲೆಯ ಪರಿಸರದಲ್ಲಿರುವ ಸಸ್ಯಗಳ ಔಷಧೀಯ ಮೂಲಗಳನ್ನು ಒಟ್ಟು ಮಾಡಿ ಅದಕ್ಕೆ ಶುಂಠಿ, ಕೊತ್ತಂಬರಿ, ಜೀರಿಗೆ ಲವಂಗ, ಒಳ್ಳೆಮೆಣಸು, ಓಮ, ಜಾಯಿಕಾಯಿ ಇತ್ಯಾದಿ ಸಂಬಾರ ಜೀನಸುಗಳನ್ನು ಸೇರಿಸಿ ದೊಡ್ಡ ಹಂಡೆಯಲ್ಲಿ ಕಷಾಯ ಮಾಡಿ ಹಂಚುವುದು ಮಳೆಗಾಲದ ಆರಂಭದ ವಾರ್ಷಿಕ ಕಾರ್ಯಕ್ರಮ.
ಇದರ ಸೇವನೆಯ ಬಳಿಕ ಮಕ್ಕಳು ಶೀತ, ಕಫ ಮತ್ತು ಜ್ವರದ ಬಾಧೆಯಿಂದ ಮುಕ್ತರಾಗಿ ತರಗತಿಗಳಲ್ಲಿ ಹಾಜರಿ ಹೆಚ್ಚುತ್ತದೆ” ಎಂದು ಹೇಳಿದರು.
ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಎಲ್ಲ ವಿದ್ಯಾರ್ಥಿಗಳಿಗೆ ಕಷಾಯ ವಿತರಿಸಿದರು. ಶಾಲಾ ಶಿಕ್ಷಕರು ಸಹಕರಿಸಿದರು.