ಚೊಕ್ಕಾಡಿ ಮಯೂರಿ ಯುವತಿ ಮಂಡಲ ಮಹಾಸಭೆ

0

ಅಧ್ಯಕ್ಷೆ ‌ಸ್ವಾತಿ ಪದವು – ಕಾರ್ಯದರ್ಶಿ ಮಧುಶ್ರೀ ಕೇನಡ್ಕ

ಚೊಕ್ಕಾಡಿ‌ ಮಯೂರಿ ಯುವತಿ ಮಂಡಲದ ವಾರ್ಷಿಕ‌ ಮಹಾಸಭೆಯು ಇತ್ತೀಚೆಗೆ ನಡೆಯಿತು.

ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಅಧ್ಯಕ್ಷರಾಗಿ ಸ್ವಾತಿ ಪದವು, ಕಾರ್ಯದರ್ಶಿ ಮಧುಶ್ರೀ ಕೇನಡ್ಕ, ಕೋಶಾಧಿಕಾರಿಯಾಗಿ ಹೇಮಾವತಿ ತಂಟೆಪ್ಪಾಡಿ ಆಯ್ಕೆಯಾದರು.


ಜತೆ ಕಾರ್ಯದರ್ಶಿ ಸನ್ನಿಧಿ ಪೂಜಾರಿಮನೆ, ಉಪಾಧ್ಯಕ್ಷರಾಗಿ ಹೇಮಲತಾ ಪಡ್ಪು, ಕ್ರೀಡಾ ಕಾರ್ಯದರ್ಶಿ ಶಶಿಕಲಾ ಕಾಯರ, ಕ್ರೀಡಾ ಜತೆ ಕಾರ್ಯದರ್ಶಿ ದೀಪಿಕಾ, ಪತ್ರಿಕಾ ಮಾಧ್ಯಮ ಕಾರ್ಯದರ್ಶಿ ದಿಶಾ ಕರ್ಮಾಜೆ, ಸಾಂಸ್ಕೃತಿಕ ಕಾರ್ಯದರ್ಶಿ ದಿವ್ಯ ನಡುಗಲ್ಲು, ಸಾಂಸ್ಕೃತಿಕ ಜತೆ ಕಾರ್ಯದರ್ಶಿ ವೀಣಾ ಪಡ್ಪು, ಸಾಮಾಜಿಕ ಕಾರ್ಯದರ್ಶಿ ಧನಲಕ್ಷ್ಮೀ ಕೊಳಂಬೆ,
ಹಾಗೂ ನಿರ್ದೇಶಕರುಗಳಾಗಿ ನಂದಿನಿ ಚೆನ್ನಮಲೆ, ಪವಿತ್ರ ಇಟ್ಟಿಗುಂಡಿ, ತುಳಸಿ ಕೊಂಡೆಬೈ, ಮಾಧವಿ ಚೊಕ್ಕಾಡಿ, ಗೌರವ ಸಲಹೆಗಾರರಾಗಿ ಪಾರ್ವತಿ ನೇಣಾರು ಮತ್ತು ಶೋಭಾವತಿ ಕೊಳಂಬೆ,ಆಯ್ಕೆಯಾದರು.

ವೇದಿಕೆಯಲ್ಲಿ ಯುವಜನ ಸಂಯುಕ್ತ ಮಂಡಳಿ ಯ ಕೋಶಾಧಿಕಾರಿ ಹಾಗೂ ಚೊಕ್ಕಾಡಿ ವಲಯದ ಉಸ್ತುವಾರಿ ನಿರ್ದೇಶಕರಾದ ಮುರಳಿ ನಳಿಯಾರು ಹಾಗೂ ಯುವತಿ ಮಂಡಲದ ಪೂರ್ವಧ್ಯಕ್ಷರು ಪೂರ್ಣಿಮಾ ಚಿಕ್ಕಿನಡ್ಕ, ಕಾರ್ಯದರ್ಶಿ ವೀಣಾ ಪಡ್ಪು, ಖಜಾಂಜಿ ನಂದಿನಿ ಚೆನ್ನಮಲೆ ಉಪಸ್ಥಿತರಿದ್ದರು.