ಸುಳ್ಯದ ನ್ಯೂ ಪೃಥ್ವಿ ಚಿಕನ್ ಸೆಂಟರ್ ಮಾಲಕ ಚಂದ್ರಶೇಖರ್ ಕೆ.ಎಸ್. ನಿಧನ

0

ಸುಳ್ಯದ ಸರ್ಕಾರಿ ಜೂನಿಯರ್ ಕಾಲೇಜು ರಸ್ತೆಯಲ್ಲಿರುವ ಮೀನು ಮಾರುಕಟ್ಟೆ ಹತ್ತಿರ ಕಾರ್ಯಾಚರಿಸುತ್ತಿದ್ದ ನ್ಯೂ ಪೃಥ್ವಿ ಚಿಕನ್ ಸೆಂಟರ್ ಮಾಲಕ ಚಂದ್ರಶೇಖರ್ ಕೆ.ಎಸ್. ರವರು ಅಲ್ಪಕಾಲದ ಅಸೌಖ್ಯದಿಂದ ಜು.12 ರಂದು ಮಡಿಕೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 44 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಹೇಮಲತಾ, ಪುತ್ರಿ ಹಿತಾಶ್ರೀ, ಪುತ್ರ ಧೃತಿಕ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.