ಚಿನ್ನಪ್ಪ ಮಾಸ್ತರ್ ಪೈಕ ಬೊಮ್ಮದೆರೆಯವರ ವೈಕುಂಠ ಸಮಾರಾಧನೆ

0

ಸರಳ, ಸಧೃಡ, ಆದರ್ಶ ಶಿಕ್ಷಕ ಚಿನ್ನಪ್ಪ ಮಾಸ್ತರ್ ಮರಣದ ಬಳಿಕವೂ ಹೆಸರು ಉಳಿಯಲಿದೆ.: ಪಿ.ಸಿ ಜಯರಾಂ

ಗುತ್ತಿಗಾರು ಗ್ರಾಮದ ಚಿನ್ನಪ್ಪ ಮಾಸ್ತರ್ ಪೈಕ ಬೊಮ್ಮದೆರೆ ಅವರ ವೈಕುಂಠ ಸಮಾರಾಧನಾ ಸಮಾರಂಭ ಜು.13 ರಂದು ಹಾಲೆಮಜಲಿನ ವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು.

ಪಿ.ಸಿ ಜಯರಾಮ ಅವರು ಮೃತರ ಬಗ್ಗೆ ನುಡಿನಮನ ಅರ್ಪಿಸುತ್ತಾ ಚಿನ್ನಪ್ಪ ಮಾಸ್ತರ್ ಮನುಷ್ಯನ ಜೀವಿತ ಅವಧಿಯ ಸಂಸ್ಕಾರಕ್ಕೆ ಪ್ರಾಧಾನ್ಯತೆ ನೀಡುತಿದ್ದರು. ಮರಣದ ಬಳಿಕ ಶಾಸ್ತ್ರದ ನೆಪದಲ್ಲಿ ಪೋಲು ಮಾಡುವುದನ್ನು ವಿರೋಧಿಸುವ ಗುಣದವರು ಅವರು. ತನ್ನ ಮರಣಾನಂತರ ಗುತ್ತಿಗಾರು, ಪೈಕ ಶಾಲೆಗೆ ದತ್ತಿನಿಧಿ ಕೊಡಬೇಕು ಅವರ ಮನದಾಳದ ಆಸೆಯಾಗಿತ್ತು ಅದರಂತೆ ಅವರ ಪುತ್ರರು ಅದನ್ನು ಪೂರೈಸಲಿದ್ದಾರೆ. ಒಳ್ಳೆಯ ಸಂಸ್ಕಾರ ಭೋಧಿಸಿದ ಸರಳ, ಸಧೃಡ ಶಿಕ್ಷಕ ಚಿನ್ನಪ್ಪ ಮಾಸ್ತರ್ ಮರಣದ ಬಳಿಕವೂ ತನ್ನ ಹೆಸರು ಉಳಿಯುವಂತಹ ಹೆಸರು ಮಾಡಿದ್ದಾರೆ ಎಂದರು.

ಬಳಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಂಧುಗಳು ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.