ಪರವಾನಿಗೆ ಇಲ್ಲದೆ ಜಾನುವಾರು ಸಾಗಾಟ : ಪೋಲೀಸ್ ವಶ

0

ಪರವಾನಗಿ‌ ಇಲ್ಲದೆ ಜಾನುವಾರು ಸಾಗಾಟ ಮಾಡುತ್ತಿದ್ದವರನ್ನು ಸುಳ್ಯ ಪೋಲೀಸರು ವಶಕ್ಕೆ ಪಡೆದ ಘಟನೆ ಜು.13 ರಂದು ವರದಿಯಾಗಿದೆ.

ಬೆಳ್ಳಾರೆ ಕಡೆಯಿಂದ ಸೋಣಂಗೇರಿ ಮಾರ್ಗವಾಗಿ ಕೇರಳಕ್ಕೆ ಪಿಕಪ್ ವಾಹನದಲ್ಲಿ ‌ಜಾನುವಾರು ಸಾಗಾಟ ಮಾಡುತ್ತಿರುವ ಮಾಹಿತಿ ಪಡೆದ ಸುಳ್ಯ ಪೋಲೀಸರು ಆರ್ತಾಜೆ ಎಂಬಲ್ಲಿ ವಾಹನವನ್ನು ತಡೆದರು. ಪರಿಶೀಲನೆ ನಡೆಸಿದಾಗ ಎಮ್ಮೆ ಹಾಗೂ ಎರಡು ಎಮ್ಮೆ‌ಕರುಗಳಿದ್ದವು. ವಿಚಾರಿಸಿದಾಗ ಪರವಾನಗಿ ಇಲ್ಲದಿರುವುದು ಕಂಡು ಬಂತು.‌ಬಳಿಕ ಚಾಲಕ ರತೀಶ್ ಹಾಗು ವಾಹನವನ್ನು ವಶಕ್ಕೆ ಪಡೆದಿದ್ದಾರೆ.