ಬಾವಿ ನೀರಲ್ಲಿ ಪೆಟ್ರೋಲ್ ವಾಸನೆ, ಅಧಿಕಾರಿಗಳಿಂದ ಪರಿಶೀಲನೆ

0


ಬೆಳ್ಳಾರೆ ಸಮೀಪದ ಪಂಜಿಗಾರಿನಲ್ಲಿರುವ ಬಾವಿ ನೀರು ಪೆಟ್ರೋಲ್ ವಾಸನೆ ಬರುತ್ತಿದ್ದು, ಬಾವಿಯನ್ನು ನೋಡಿದಾಗ ತೈಲಯುಕ್ತವಾಗಿರುವುದು ಕಂಡು ಬಂದಿದೆ.


ಕಳಂಜ ಗ್ರಾಮದ ಪಂಜಿಗಾರು ದಯಾನಂದ ಗೌಡ ಎಂಬವರ ಬಾವಿ ನೀರು ಜು. 8ರಿಂದ ಪೆಟ್ರೋಲ್ ವಾಸನೆ ಬರುತ್ತಿತ್ತು. ಬಾವಿಯನ್ನು ನೋಡಿದಾಗ ನೀರಿನಲ್ಲಿ ತೈಲ ಬೆರಕೆಯಾದಂತೆ ಕಂಡುಬರುತ್ತಿತ್ತು. ಈ ಕುರಿತಂತೆ ಗ್ರಾಮ ಪಂಚಾಯತ್‌ಗೆ ದೂರು ನೀಡಿದಾಗ ಪರೀಕ್ಷೆ ನಡೆಸಲಾಗಿದ್ದು ಕ್ಲೋರೈಡ್ ಅಂಶ ಕಡಿಮೆ ಇದ್ದು ಕುಡಿಯಲು ಯೋಗ್ಯವಲ್ಲ ಎಂದು ತಿಳಿಸಿದ್ದಾರೆಂದು ತಿಳಿದು ಬಂದಿದೆ.