ಲಯನ್ಸ್ ಇಂಟರ್‌ನ್ಯಾಷನಲ್ ಜಿಲ್ಲೆ 317 ಬಿ ಯ ರೀಜನ್ 6,7 & 8ರ ಲಯನ್ಸ್ ಕ್ಲಬ್‌ಗಳ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಖಜಾಂಜಿಗಳಿಗೆ ಲಯನಿಸಂ ಬಗ್ಗೆ ತರಬೇತಿ ನೀಡುವ ಪಿಎಸ್‌ಟಿ ಸೆಮಿನಾರ್ ಇಂದು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಆರಂಭಗೊಂಡಿತು.

ಲಯನ್ಸ್ ಜಿಲ್ಲೆ ೩೧೭ ಬಿ ಯ ರಾಜ್ಯಪಾಲ ಮೆಲ್ವಿನ್ ಡಿಸೋಜಾ ದೀಪ ಬೆಳಗಿಸಿ ಸೆಮಿನಾರನ್ನು ಉದ್ಘಾಟಿಸಿದರು. ಉಪರಾಜ್ಯಪಾಲರುಗಳಾದ ಶ್ರೀಮತಿ ಭಾರತಿ ಬಿ.ಎಂ. ಹಾಗೂ ಅರವಿಂದ ಶೆಣೈ ಪ್ರಾಂತ್ಯಾಧ್ಯಕ್ಷರುಗಳಾದ ಲ. ಶ್ರೀಮತಿ ರೇಣುಕಾ ಸದಾನಂದ ಜಾಕೆ, ಲ್ಯಾನ್ಸಿ ಮಸ್ಕರೇನ್ಹಸ್, ನವೀನ್ ದಂಬೆಕೋಡಿ, ಕ್ಯಾಬಿನೆಟ್ ಸೆಕ್ರೆಟರಿ ಓಸ್ವಾಲ್ಡ್ ಡಿಸೋಜಾ, ಕ್ಯಾಬಿನೆಟ್ ಟ್ರೆಸರರ್ ಸುಧಾಕರ ಶೆಟ್ಟಿ, ಪೂರ್ವ ರಾಜ್ಯಪಾಲರುಗಳಾದ ಲ. ಎಂ.ಬಿ.ಸದಾಶಿವ ಹಾಗೂ ಲ. ವಸಂತಕುಮಾರ್ ಶೆಟ್ಟಿ, ಲಿಯೊ ಅಧ್ಯಕ್ಷೆ ಡಾ. ರಂಜಿತಾ ಶೆಟ್ಟಿ, ತರಬೇತುದಾರರಾದ ಲ. ಜಯರಾಮ ದೇರಪ್ಪಜ್ಜನಮನೆ, ಲ. ವೆಂಕಟೇಶ ಹೆಬ್ಬಾರ್, ಲ. ರತ್ನ ಚಂರ್ಬಣ್ಣ, ವೇದಿಕೆಯಲ್ಲಿದ್ದರು.




ಈ ಪಿಎಸ್‌ಟಿ ಸೆಮಿನಾರ್‌ರ ನೇತೃತ್ವ ವಹಿಸಿರುವ ಲಯನ್ ಪ್ರಾಂತ್ಯಾಧ್ಯಕ್ಷೆ ಶ್ರೀಮತಿ ರೇಣುಕಾ ಸದಾನಂದ ಜಾಕೆ ಸ್ವಾಗತಿಸಿದರು. ಸುಳ್ಯ ಲಯನ್ಸ್ ಕ್ಲಬ್ ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು ಲಯನ್ಸ್ ಧ್ಯೇಯವಾಣಿ ವಾಚಿಸಿದರು. ಡಿಸ್ಟ್ರಿಕ್ಟ್ ಕೋ ಆರ್ಡಿನೇಟರ್ ಲ. ಪ್ರವೀಣ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುಳ್ಯ ಲಯನ್ಸ್ ಅಧ್ಯಕ್ಷ ವೀರಪ್ಪ ಗೌಡ ಮತ್ತು ತಂಡದ ಸದಸ್ಯರು ಲಯನ್ಸ್‌ನ ಹಿರಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮೂರು ವಲಯಗಳ ೨೮ ಕ್ಲಬ್‌ಗಳ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಜಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಇಂದು ಮಧ್ಯಾಹ್ನ ಕಾರ್ಯಾಗಾರ ಮುಕ್ತಾಯಗೊಳ್ಳಲಿದೆ.