ಸೈಂಟ್ ಬ್ರಿಜಿಡ್ಸ್ ಅ.ಹಿ.ಪ್ರಾ.ಶಾಲೆಯ ನೂತನ ಮಂತ್ರಿಮಂಡಲ

0

ಸೈಂಟ್ ಬ್ರಿಜಿಡ್ಸ್ ಅ.ಹಿ.ಪ್ರಾ.ಶಾಲೆ ಸುಳ್ಯ ಇಲ್ಲಿ 2023-24 ನೇ ಸಾಲಿನ ನೂತನ ಮಂತ್ರಿ ಮಂಡಲವನ್ನು ಜೂ. 9 ಶುಕ್ರವಾರ ದಂದು ರಚನೆ ಮಾಡಲಾಯಿತು.
5,6,7ನೇ ತರಗತಿಯ ವಿದ್ಯಾರ್ಥಿಗಳು ಮತಗಳನ್ನು ಚಲಾಯಿಸುವುದರ ಮೂಲಕ ಶಾಲಾ ನಾಯಕ ಹಾಗೂ ಉಪನಾಯಕನನ್ನು ಆಯ್ಕೆ ಮಾಡಲಾಯಿತು. ಅತೀ ಹೆಚ್ಚು ಮತಗಳನ್ನು ಗಳಿಸುವುದರ ಮೂಲಕ ಶಾಲಾ ನಾಯಕನಾಗಿ 7ನೇ ತರಗತಿಯ ನೇಸರ್ ಪಿ.ಯು ಮತ್ತು ಉಪನಾಯಕನಾಗಿ ಕೌಶಿಕ್ ಪಿ. ರವರನ್ನು ನೇಮಕ ಮಾಡಲಾಯಿತು.
ಹಾಗೆಯೇ ಮುಖ್ಯ ಶಿಕ್ಷಕರಾದ ಸಿಸ್ಟರ್ ಅಂತೋನಿ ಮೇರಿ ಹಾಗೂ 7ನೇ ತರಗತಿ ಶಿಕ್ಷಕಿಯಾಗಿರುವ ಶ್ರೀಮತಿ ವಲ್ಸ ಟೀಚರ್ ಮತ್ತು ದೈಹಿಕ ಶಿಕ್ಷಕರಾದ ಶ್ರೀಯುತ ಉಮೇಶ್ ಪಿ.ರವರ ಸಹಕಾರದೊಂದಿಗೆ ಇತರ ಮಂತ್ರಿಗಳನ್ನು ನೇಮಿಸಲಾಯಿತು.

ಶಿಕ್ಷಣ ಮಂತ್ರಿಯಾಗಿ ಆಯಿಷತ್ ಹೈಫಾ, ನಚನ ಜಿ, ಶಿಸ್ತು ಮಂತ್ರಿಯಾಗಿ – ಸನಾ ಫಾತಿಮ ,ಚಿರಾಗ್ ,ಝೀನತ್, ಆರೋಗ್ಯ ಮಂತ್ರಿಯಾಗಿ – ಲಾವಣ್ಯ ಎಂ ,ಫಾತಿಮತ್ ರಾಹಿಲಾ ,ಬಿಂದು, ಶುಚಿತ್ವ ಮಂತ್ರಿಯಾಗಿ ಗಾನವಿ , ಸಿಂಚನಾ, ಕ್ರೀಡಾ ಮಂತ್ರಿಯಾಗಿ – ಅನಫಲ್ ,ನಿರೀಕ್ಷಾ ,ಸಾನ್ವಿ ಎಂ ರೈ, ಗೃಹ ಮಂತ್ರಿಯಾಗಿ – ರೂಪೇಶ್ ,ಸಮದ್
ಸಾಂಸ್ಕೃತಿಕ ಮಂತ್ರಿಯಾಗಿ – ರಕ್ಷಿತಾ ,ಕೃತಿ, ತೋಟಗಾರಿಕೆ ಮಂತ್ರಿಯಾಗಿ – ಶಶಾಂಕ್ ,ಸ್ವರೂಪ್,

ನೀರಾವರಿ ಮಂತ್ರಿಯಾಗಿ – ವಿಖ್ಯಾತ್ ,ಸಂದೇಶ್ ಎಂ.ಎಲ್ ,ಜ್ಞಾನೇಶ್,ರೋಶನ್ ,ವಿನ್ಯಾಸ್,ಹಿತೇಶ್, ಆಹಾರ ಮಂತ್ರಿಯಾಗಿ -ಭವಿಷ್ ರೈ,ಅಕೀಲ್ ,ಚರಿತ್ ಹಾಗೂ ವಿರೋಧ ಪಕ್ಷದ ನಾಯಕನಾಗಿ ಮಹಮ್ಮದ್ ಹಾಝಿಂ ಸದಸ್ಯರಾಗಿ ಲಿಖಿತ್ ,ಆದ್ಯಂತ್ ,ಸಾತ್ವಿಕ್,ಅನೀಶ್ ಮಚಾದೋ ರವರನ್ನು ನೇಮಿಸಲಾಯಿತು.

ಎಲ್ಲಾ ಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವು ದಿನಾಂಕ 15-06-2023ನೇ ಗುರುವಾರದಂದು ಶಿಕ್ಷಕಿ ಶ್ರೀಮತಿ ಸ್ಮಿತಾರವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಎಲ್ಲಾ ಶಿಕ್ಷಕರು ಜೊತೆಗಿದ್ದು ಸಹಕರಿಸಿದರು.