ಸುಳ್ಯ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಮಹಾಸಭೆ

0

ನೂತನ ಪದಾಧಿಕಾರಿಗಳ ಆಯ್ಕೆ

ಸುಳ್ಯ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಇದರ 2022- -23 ರ ಸಾಲಿನ ವಾರ್ಷಿಕ ಮಹಾಸಭೆಯು ಜು. 14 ರಂದು ಸುಳ್ಯದ ಸೈಂಟ್ ಬ್ರಿಜಿಡ್ಸ್ ಸಭಾಂಗಣದಲ್ಲಿ ಅಧ್ಯಕ್ಷೆ ವನಿತಾ ಮಂಡೆಕೋಲು ಇವರ ಸಭಾಧ್ಯಕ್ಷತೆಯಲ್ಲಿ ನಡೆಯಿತು.

ವಾರ್ಷಿಕ ವರದಿಯನ್ನು ಹಾಗೂ ಜಮಾ ಖರ್ಚಿನ ವಿವರವನ್ನು ಕಾರ್ಯದರ್ಶಿ ಚಿನ್ನಮ್ಮ ದೇವಚಳ್ಳ ಸಭೆಗೆ ಮಂಡಿಸಿದರು. ವರ್ಷದ ಕಾರ್ಯಕ್ರಮಗಳ ಅವಲೋಕನ ನಡೆಯಿತು. 2023- -24ರ ಸಾಲಿನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಧನಂಜಯ ಮೇರ್ಕಜೆ ಸ. ಹಿ.ಪ್ರಾ. ಶಾಲೆ ಇಡ್ಯಡ್ಕ, ಕಾರ್ಯದರ್ಶಿಯಾಗಿ ಪುಷ್ಪಾವತಿ ಕೆ .ಪಿ. ಎಸ್ ಬೆಳ್ಳಾರೆ, ಕೋಶಾಧಿಕಾರಿ ಉಮೇಶ್ ಸೈಂಟ್ ಬ್ರಿಜಿಡ್ಸ್ ಸುಳ್ಯ, ಉಪಾಧ್ಯಕ್ಷರಾಗಿ ಹರಿಪ್ರಸಾದ್ ರೈ ವಿದ್ಯಾಬೋಧಿನಿ ಪ್ರೌ.ಶಾಲೆ ಬಾಳಿಲ, ಗೌರವಾಧ್ಯಕ್ಷರಾಗಿ ವನಿತಾ, ಸ . ಹಿ.ಪ್ರಾ . ಶಾಲೆ ಮಂಡೆಕೋಲು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅನಿಲ್ ಸತ್ಯಸಾಯಿ ಚೊಕ್ಕಾಡಿ, ದಿನಕರ ಕುಮಾರಸ್ವಾಮಿ ಸುಬ್ರಹ್ಮಣ್ಯ ,ಸ್ಮಿತಾ. ಎಸ್ ಎಸ್ ಪಿ ಯು ಸುಬ್ರಮಣ್ಯ ,ಮಾಲತಿ ಸ. ಹಿ.ಪ್ರಾ. ಶಾಲೆ ಐವರ್ನಾಡು, ರಾಮಚಂದ್ರ ಸ.ಪ್ರೌ. ಶಾಲೆ ಎಣ್ಮೂರು ,ನಟರಾಜ್ ,ಸ.ಪ. ಪೂ .ಕಾಲೇಜು ಸುಳ್ಯ ,ಸುನಂದ ಸ.ಮಾದರಿ ಶಾಲೆ ಸುಳ್ಯ, ರೇವತಿ ಸ.ಪ್ರೌ. ಶಾಲೆ ಅಜ್ಜಾವರ ,ಪ್ರಭಾವತಿ ಶಾರದಾ ಪ್ರೌ. ಸುಳ್ಯ, ಚಿನ್ನಮ್ಮಸ. ಹಿ. ಪ್ರಾ.ಶಾಲೆ ದೇವಚಳ್ಳ, ಪದ್ಮನಾಭ ಸ.ಪ್ರೌ.ಶಾಲೆ ಎಡಮಂಗಲ ಇವರುಗಳನ್ನು ಸರ್ವಾನುಮತದಿಂದ ಆರಿಸಲಾಯಿತು.

ವೇದಿಕೆಯಲ್ಲಿ ಸುಳ್ಯ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀ ಸೂಫಿ ಪೆರಾಜೆ ಉಪಸ್ಥಿತರಿದ್ದು, ನೂತನ ಸಮಿತಿಗೆ ಶುಭ ಕೋರಿದರು .ನಂತರ ನೂತನ ಸಮಿತಿಯ ಅಧ್ಯಕ್ಷರಾದ ಶ್ರೀ ಧನಂಜಯ ಮೇರ್ಕಜೆ ಇವರು ಮಾತನಾಡುತಾ , ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುವಂತಹ ಕಾರ್ಯಕ್ರಮಗಳಿಗೆ ಎಲ್ಲಾ ಸದಸ್ಯರ ಸಹಕಾರವನ್ನು ಯಾಚಿಸಿದರು. ವನಿತಾ ಮಂಡೆಕೋಲು ಸ್ವಾಗತಿಸಿ, ಚಿನ್ನಮ್ಮ ದೇವಚಳ್ಳ ವಂದಿಸಿ, ಕೊರಗಪ್ಪ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.