ಕರ್ನಾಟಕ ರಾಜ್ಯದ ಪ್ರತಿಷ್ಠಿತ ದಂತ ಮಹಾವಿದ್ಯಾಲಯಗಳಲ್ಲಿ ಒಂದಾದ P.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಅಮೆರಿಕಾದ ಪ್ರತಿಷ್ಠಿತ ದಂತ ವೈದ್ಯಕೀಯ ಕಂಪನಿಯ ಮಧ್ಯೆ ಮಾಹಿತಿ ಮತ್ತು ಕಾರ್ಯಗಾರ ಒಡಂಬಡಿಕೆ ಪತ್ರಿಕೆ ಸಹಿ ಹಾಕಲಾಯಿತು,
ಡಾ| ಆಂಡ್ರಸನ್ ಕೊಟ್ಟೊ ಮತ್ತು ಸಾಫ್ಟವೇರ್ ತಜ್ಞ ಶುಶ್ರತ್ ಮತ್ತು ಡಾ|ರಾಧಿಕಾ ಅವರುಗಳ ತಂಡ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನಲ್ಲಿ ನೀಡುತ್ತಿರುವ ಚಿಕಿತ್ಸೆಯ ಬಗ್ಗೆ ವಿವರಗಳನ್ನು ಪಡೆದುಕೊಂಡು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ವಕ್ರದಂತ ವಿಭಾಗದಲ್ಲಿ ಅತ್ಯಾಧುನಿಕ ಚಿಕಿತ್ಸೆಯ ಬಗ್ಗೆ ಇನ್‌ಬ್ರ್ಯಾಸ್ ಕಂಪನಿಯ ವತಿಯಿಂದ ಮುಂದಿನ ದಿನಗಳಲ್ಲಿ ಮಾಹಿತಿ ಮತ್ತು ಕಾರ್ಯಗಳೂ ಅಲ್ಲದೆ ನುರಿತ ದಂತ ವೈದ್ಯರಿಂದ ಅತ್ಯಾಧುನಿಕ ಚಿಕಿತ್ಸೆಯನ್ನು ನೀಡುವ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಈ ಒಡಂಬಡಿಕೆಯಿಂದಾಗಿ ಕೆ.ವಿ.ಜಿ ದಂತಮಹಾವಿದ್ಯಾಲಯದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅಮೇರಿಕಾಕ್ಕೆ ತೆರಳುವ ಅವಕಾಶ ದೊರೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದರು..
ಈ ಸಂದರ್ಭದಲ್ಲಿ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಉಜ್ವಲ್ ಊರುಬೈಲು, ಕಾಲೇಜಿನ ಪ್ರಾಂಶುಪಾಲರಾದ ಡಾ|ಮೋಕ್ಷ ನಾಯಕ್ ವಿಭಾಗ ಮುಖ್ಯಸ್ಥರಾದ ಡಾ|ಶರತ್ ಶೆಟ್ಟಿ, ಕಾಲೇಜಿನ ಆಡಳಿತ ಪರಿ?ತ್ ಸದಸ್ಯರಾದ ಡಾ ಮನೋಜ್ ಕುಮಾರ್ ಅಡ್ಡಂತಡ್ಕ ಪ್ರಾಧ್ಯಾಪಕರುಗಳಾದ ಡಾ| ರೇವಂತ್, ಕಾಲೇಜಿನ ಆಡಳಿತ ಅಧಿಕಾರಿ ಮಾಧವ ಬಿ.ಟಿ ಉಪಸ್ಥಿತರಿದ್ದರು.
Home ಪ್ರಚಲಿತ ಸುದ್ದಿ ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಅಮೆರಿಕಾದ ಇನ್‌ಬ್ರ್ಯಾಸ್ ಕಂಪನಿಯ ಮಧ್ಯೆ ಮಾಹಿತಿ ಕಾರ್ಯಗಾರ ಒಡಂಬಡಿಕೆ