ಶೀನಪ್ಪ ಗೌಡ ಎಂರ್ಬಿಲರಿಗೆ ಶ್ರದ್ಧಾಂಜಲಿ ಸಭೆ, ಶೀನಪ್ಪ ಗೌಡರು ಕಂಬಳ ಓಟದಲ್ಲಿ ಎತ್ತಿದ ಕೈ : ಗಣಪಯ್ಯ ಗೌಡ

0

ತಮ್ಮ ಜೀವನದುದ್ದಕ್ಕೂ ಪರೋಪಕಾರಿಯಾಗಿ ಬದುಕಿದ ಶೀನಪ್ಪ ಗೌಡ ಎಂರ್ಬಿಲರವರು ಗದ್ದೆ ನಾಟಿಯೊಂದಿಗೆ ಕಂಬಳ ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ನಮ್ಮೂರಿನ ಏಕೈಕ ಕಂಬಳ ಓಟಗಾರನಾಗಿದ್ದ ಶೀನಪ್ಪ ಗೌಡರು ಊರಿನ ಯಾವುದೇ ಮನೆಯ ಕಾರ್ಯಕ್ರಮವಾದರೂ ತಮ್ಮ ಮನೆಯ ಕಾರ್ಯಕ್ರಮವೆಂಬಂತೆ ಸಹಕರಿಸುತ್ತಿದ್ದರು ಎಂದು ಗಣಪಯ್ಯ ಗೌಡ ಎಣ್ಣೆಮಜಲು ಹೇಳಿದರು. ಅವರು ಜು. 18ರಂದು ಬಳ್ಪ ಗ್ರಾಮದ ಎಂರ್ಬಿಲ ಶೀನಪ್ಪ ಗೌಡರ ಶ್ರದ್ಧಾಂಜಲಿ ಸಭೆಯಲ್ಲಿ ಮೃತರಿಗೆ ನುಡಿನಮನ ಸಲ್ಲಿಸುತ್ತಾ ಮಾತನಾಡಿದರು.

ಶೀನಪ್ಪ ಗೌಡರ ಪುತ್ರಿ ಬಳ್ಪ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಮೋಹಿನಿ ವೀರಪ್ಪ ಗೌಡ‌ ಸ್ವಾಗತಿಸಿ ಬಳಿಕ ಮಾತನಾಡಿ ತಂದೆಯವರ ತಾಯಿ ನಿಧನರಾದ ಸಂದರ್ಭದಲ್ಲಿ ಈ ಮನೆಗೆ ಆಸರೆ ನೀಡಿದವರು ಎಣ್ಣೆಮಜಲು ಪುಟ್ಟಣ್ಣ ಗೌಡರು. ಜೀವನದುದ್ದಕ್ಕೂ ಅವರ ಸಹಾಯವನ್ನು ಮರೆಯದಿರಿ. ಮನೆಗೆ ಬಂದ ಅತಿಥಿಗಳಿಗಳನ್ನು ಉಪಚರಿಸಬೇಕು ಎಂಬಿತ್ಯಾದಿ ಸಂಸ್ಕಾರವನ್ನು ಕಲಿಸಿದವರು ಎಂದರು. ಬಳಿಕ ಬಳ್ಪ ಗ್ರಾ.ಪಂ. ಮಾಜಿ ಸದಸ್ಯ ರಮಾನಂದ ಎಣ್ಣೆಮಜಲು ನುಡಿನಮನ ಸಲ್ಲಿಸಿದರು.

ಮೃತರ ಪತ್ನಿ ಶ್ರೀಮತಿ ನೀಲಮ್ಮ, ಪುತ್ರ ರಾಮಚಂದ್ರ ಎಂರ್ಬಿಲ, ಸೊಸೆ ಶ್ರೀಮತಿ ತುಳಸಿ, ಪುತ್ರಿಯರಾದ ಶ್ರೀಮತಿ ದೇವಕಿ ಕುಶಾಲಪ್ಪ ಮದ್ಕೂರು, ಶ್ರೀಮತಿ ಸುಲೋಚನ ರಮೇಶ್ ಕಟ್ಟೆಮನೆ ಶ್ರೀಮತಿ ಮೀನಾಕ್ಷಿ ತಿಮ್ಮಪ್ಪ ಅರುವ, ಶ್ರೀಮತಿ ಮೋಹಿನಿ ವೀರಪ್ಪ ಗೌಡ ಚಿದ್ಗಲ್, ಶ್ರೀಮತಿ ಶಶಿಕಲಾ ದೇವಪ್ಪ ಕಾಪಿಲ, ಶ್ರೀಮತಿ ಸುಶೀಲ ವೆಂಕಟ್ರಮಣ ಚೌಟಾಜೆ, ಶ್ರೀಮತಿ ಯಶೋಧ ವಸಂತ ಕಲ್ಗುಂಡಿ, ಶ್ರೀಮತಿ ವಿಶಾಲ ಶ್ರೀನಿವಾಸ ಬೆಂಗಳೂರು ಸೇರಿದಂತೆ ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಷ್ಪನಮನ ಸಲ್ಲಿಸಿದರು.