ಸುಳ್ಯ ತಾಲೂಕು ಅರಂತೋಡು ಗ್ರಾಮದ ಬಿಳಿಯಾರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ
ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಶ್ರಮದಾನ ಕಾರ್ಯಕ್ರಮ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯನಿ ಶೀಲಾವತಿ ಕೆ ಎನ್ ಸವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ರವರ ಭಾವ ಚಿತ್ರವಿರುವ ಧ್ವಜವನ್ನು ಹಾರಿಸಿ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಲಾ ವಿದ್ಯಾರ್ಥಿಗಳಾದ ಪೃಥ್ವಿ ಹಾಗೂ ಶ್ರಾವ್ಯ ಚಾರ್ಯ, ಸಿಂಚನ ಪ್ರಾರ್ಥನಾ ಗೀತೆಯನ್ನು ಹಾಡಿದರು.
ಸಂಜೆ 5 ಗಂಟೆಯವರೆಗೆ ಶ್ರಮದಾನ ಕಾರ್ಯ ನಡೆದ ಬಳಿಕ ಸಮಾರೋಪ ಸಭೆ ನಡೆಯಿತು.
ಈ ವೇಳೆ ಮಾತನಾಡಿದ ಮುಖ್ಯ ಶಿಕ್ಷಕಿ ಶೀಲಾವತಿ ‘ಅಂಬೇಡ್ಕರ್ ರಕ್ಷಣಾ ವೇದಿಕೆಯ ಸದಸ್ಯರು ಒಂದು ದಿನ ಸಂಪೂರ್ಣವಾಗಿ ನಮ್ಮ ಶಾಲಾ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ಶಾಲಾ ಪರಿಸರವನ್ನು ಸ್ವಚ್ಛಗೊಳಿಸಿರುವುದು ಶ್ಲಾಘನೆಗೆ ಅರ್ಹವಾದ ಸಂಗತಿಯಾಗಿದೆ.ಅಂಬೇಡ್ಕರ್ ರಕ್ಷಣಾ ವೇದಿಕೆ ಉತ್ತಮ ಕೆಲಸ ಕಾರ್ಯಗಳನ್ನು ಶಾಲೆಗೆ ಮಾಡುತ್ತಿದ್ದು ನಮ್ಮಶಾಲಾ ಮಕ್ಕಳಿಗೆ ಆಟವಾಡಲು ಕಷ್ಟವಾಗುತ್ತಿರುವ ಬಗ್ಗೆ ಹೇಳಿಕೊಂಡಾಗ ನಮ್ಮಕೋರಿಕೆಗೆ ಸ್ಪಂದಿಸಿ ಸಹಕರಿಸಿರುವುದು ತುಂಬಾ ಸಂತೋಷ ತಂದಿದೆ ಎಂದು ಹೇಳಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಸುಂದರ ಪಾಟಾಜೆ ಮಾತನಾಡಿ ಶಾಲಾ ಮುಖ್ಯೋಪಾಧ್ಯಾರು ವೇದಿಕೆಯ ವತಿಯಿಂದ ನಮ್ಮ ಶಾಲೆಯಲ್ಲಿ ಶ್ರಮಾದಾನ ಮಾಡಿಕೊಡ ಬೇಕೆಂದು ಕೇಳಿಕೊಂಡರು ಅದಕ್ಕೆ ನಾವು ಮತ್ತು ಅರಂತೋಡು ಘಟಕದ ಎಲ್ಲಾ ಪದಾಧಿಕಾರಿಗಳು ಸೇರಿ ಈ ಶ್ರಮದಾನವನ್ನು ಮಾಡಿದ್ದೇವೆ ಎಂದು ಹೇಳಿದರು.
ಸರಕಾರಿ ಶಾಲೆಯಲ್ಲಿ ಹೆಚ್ಚಾಗಿ ಬಡ ಮಕ್ಕಳು ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳುತ್ತಿದ್ದು ಶಾಲೆಗಳಿಗೆ ಸರ್ಕಾರದಿಂದ ಅನುದಾನ ಹೆಚ್ಚಾಗಿ ಬರಬೇಕಾಗಿದೆ.ಮತ್ತು ಸರಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಸರ್ಕಾರಗಳು ಮೊದಲ ಆದ್ಯತೆಯನ್ನು ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕಿ ಅನಿತಾ, ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮಿ,ಸಹಾಯಕಿ ರೇಖಾ, ಸಂಘಟನೆಯ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ರಮೇಶ ಕೊಡಂಕಿರಿ, ಕಾರ್ಯದರ್ಶಿ ತೇಜಕುಮಾರ್ ಅರಮನೆಗಯ, ಅರಂತೋಡು ಘಟಕ ಅಧ್ಯಕ್ಷ ನವೀನ್ ಕಲ್ಲುಗುಡ್ಡೆ, ಕಾರ್ಯದರ್ಶಿ ರಾಧಾಕೃಷ್ಣ ಅರಮನೆಗಯ,ಸ್ಥಳೀಯ ನಿವಾಸಿಗಳಾದ ಧನಂಜಯ, ಬಾಲಕೃಷ್ಣ,ಸುಮತಿ,ಲೀಲಾವತಿ,ಸೀತಮ್ಮ,ಗಂಗಾಧರ,ರುಕ್ಮಿಣಿ,ಯತೀಶ,ಸೀತಾರಾಮ, ಚಂದ್ರಶೇಖರ, ಕೊರಗಪ್ಪ,ಲಕ್ಷ್ಮೀಶ,ಶೀಲಾವತಿ, ಅನಿತಾ,ಕುಸುಮಾಧರ,ಗೋಪಾಲಕೃಷ್ಣ,ಈಶ್ವರ,ವಂದನ,ಸೀತಾ ಬಿ,ಪ್ರೇಮಲತಾ ಕೆ ಪಿ,ಕಮಲ ಬಿ ಜುಬೇದಾ,ಶೃತಿ ಬಿ,ವಾರಿಜ,ಶೇಷಮ್ಮ ಮೊದಲಾದವರು ಉಪಸ್ಥಿತರಿದ್ದರು.