3 ಜಿ.ಪಂ., 11 ತಾ.ಪಂ. ಕ್ಷೇತ್ರ ಅಂತಿಮ : ಸೋಮವಾರ ಆಯೋಗಕ್ಕೆ ವರದಿ ಸಲ್ಲಿಕೆ
ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್: ಬಿಎಲ್ ಒ ಗಳಿಗೆ ನಿರ್ದೇಶನ ನೀಡಲು ಒತ್ತಾಯ
ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಕ್ಷೇತ್ರಗಳ ಸಂಖ್ಯೆ, ವ್ಯಾಪ್ತಿ ನಿರ್ಣಯದ ಸಭೆಯು ತಾಲೂಕು ಕಚೇರಿಯಲ್ಲಿ ಜು.21 ರಂದು ತಹಶೀಲ್ದಾರ್ ಮಂಜುನಾಥ್ ರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ದಿನೇಶ್ ಅಂಬೆಕಲ್ಲು, ಬಿಜೆಪಿಯ ಸುಭೋದ್ ಶೆಟ್ಟಿ ಮೇನಾಲ, ಚನಿಯ ಕಲ್ತಡ್ಕ, ಜೆಡಿಎಸ್ ಪಕ್ಷದಿಂದ ಸುಕುಮಾರ್ ಕೋಡ್ತುಗುಳಿ, ರಾಕೇಶ್ ಕುಂಟಿಕಾನ, ಉಪತಹಶೀಲ್ದಾರ್ ಮಂಜುನಾಥ್, ಚುನಾವಣಾ ಶಾಖೆಯ ಕೌಶಿಕ್ ಇದ್ದರು.
ತಹಶೀಲ್ದಾರ್ ಮಂಜುನಾಥ್ ಮಾತನಾಡಿ ಇಲ್ಲಿಯ ಜನಸಂಖ್ಯೆ ಆಧಾರದಲ್ಲಿ 3 ಜಿ.ಪಂ., 11 ತಾ.ಪಂ. ಕ್ಷೇತ್ರವನ್ನು ನಿಗದಿ ಮಾಡಲಾಗಿದೆ. ಈ ಕುರಿತು ಸೋಮವಾರ ಕ್ಷೇತ್ರದ ಶಾಸಕರಿದ್ದು ಅಂತಿಮ ಸಭೆ ನಡೆಸಿ ವರದಿಯನ್ನು ಆಯೋಗಕ್ಕೆ ಸಲ್ಲಿಸಲಿದ್ದೇವೆ ಎಂದು ಹೇಳಿದರು.
ಬಿಜೆಪಿಯ ಸುಭೋದ್ ಶೆಟ್ಟಿ, ಯವರು ಕ್ಷೇತ್ರ ವ್ಯಾಪ್ತಿಯ ಕುರಿತು ಈ ಹಿಂದೆ ಚರ್ಚೆಗಳಾಗಿದ್ದು ಅದರಲ್ಲಿ ಬದಲಾವಣೆ ಇಲ್ಲವಲ್ಲ ಎಂದು ಹೇಳಿದರು. “ಬದಲಾವಣೆ ಇಲ್ಲ. ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ವಿಂಗಡಣೆ ಆಗಿದೆ ಎಂದು ಹೇಳಿ, ಜಾಲ್ಸೂರು, ಗುತ್ತಿಗಾರು, ಬೆಳ್ಳಾರೆ ಜಿ.ಪಂ. ಕ್ಷೇತ್ರ, ಹಾಗೂ ಬೆಳ್ಳಾರೆ, ಬಾಳಿಲ, ಐವರ್ನಾಡು, ಜಾಲ್ಸೂರು, ಅಜ್ಜಾವರ, ಆಲೆಟ್ಟಿ, ಅರಂತೋಡು, ಮಡಪ್ಪಾಡಿ, ನೆಲ್ಲೂರುಕೆಮ್ರಾಜೆ, ಗುತ್ತಿಗಾರು, ಪಂಜ ಹೀಗೆ 11 ತಾಲೂಕು ಪಂಚಾಯತ್ ಕ್ಷೇತ್ರ ನಿಗದಿಯಾಗಿದೆ ಎಂದು ಹೇಳಿದರು.
ನೀವು ಜನಸಂಖ್ಯೆ ಆಧಾರ ಕ್ಷೇತ್ರ ವಿಂಗಡಿಸಲಾಗಿದೆ.ಆದರೆ ಕೆಲವು ಗ್ರಾಮಗಳು ಜಿ.ಪಂ. ಕ್ಷೇತ್ರಕ್ಕೆ ತುಂಬಾ ದೂರ ಆಗುತ್ತದೆ. ಈ ಹಿಂದಿನಂತೆ ನಾಲ್ಕು ಜಿ.ಪಂ. ಕ್ಷೇತ್ರ ಇರಬಹುದಿತ್ತು ಎಂದು ದಿನೇಶ್ ಅಂಬೆಕಲ್ಲು ಸಲಹೆ ನೀಡಿದಾಗ, ಜಿಲ್ಲೆಯಲ್ಲಿ ಒಟ್ಟು 35 ಕ್ಷೇತ್ರ ಇದೆ. ಅದನ್ನು ವಿಂಗಡಿಸಿದ್ದಾರೆ. ಸುಳ್ಯಕ್ಕೆ 3 ಜಿ.ಪಂ. ಕ್ಷೇತ್ರ ಇದೆ ಎಂದು ಉಪತಹಶೀಲ್ದಾರ್ ಚಂದ್ರಕಾಂತರು ಹೇಳಿದರು.
ಬೂತ್ ವಿಂಗಡಣೆಗೆ ಸಂದರ್ಭ ಬೂತ್ ಒಂದರಲ್ಲಿ 1500ಕ್ಕಿಂತ ಹೆಚ್ಚು ಮತದಾರರಿಲ್ಲದಂತೆ ವಿಂಗಡಿಸಿ ಎಂದು ರಾಕೇಶ್ ಕುಂಟಿಕಾನ, ಸುಕುಮಾರ್ ಕೋಡ್ತುಗುಳಿ ಸಲಹೆ ನೀಡಿದರು.
ಸುಭೋದ್ ಶೆಟ್ಟಿ ಮೇನಾಲ ಹಾಗೂ ದಿನೇಶ್ ಅಂಬೆಕಲ್ಲು ಸಲಹೆ ನೀಡಿದರು.
ಬಿಎಲ್ ಒ ಗಳಿಗೆ ನಿರ್ದೇಶನ ನೀಡಿ
ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಆಗಿರುವ ವಿಚಾರದ ಕುರಿತು ಸಭೆಯಲ್ಲಿದ್ದ ಪಕ್ಷದ ನಾಯಕರು ಅಸಮಾಧಾನಗೊಂಡರು.
ಮುಂದೆ ಈ ರೀತಿ ಆಗಬಾರದು. ಸರ್ವೆ ಕಾರ್ಯ ನಡೆಸುವ ಬಿಎಲ್ ಒ ಗಳು ಆ ಮನೆಗಳಿಗೆ ಹೋಗುವ ಸಂದರ್ಭ ಮತದಾರ ಇಲ್ಲವೆಂದಾದರೆ ಹೆಸರು ಡಿಲೀಟ್ ಮಾಡುವುದಲ್ಲ. ಅವರಿಗೇ ವಿಚಾರಿಸಿದ ಬಳಿಕವಷ್ಟೇ ಡಿಲೀಟ್ ಮಾಡಲಿ ಎಂದು ಎಲ್ಲರೂ ಅಭಿಪ್ರಾಯ ಹೇಳಿದರಲ್ಲದೆ, ಮುಂದೆ ಕಾರಣ ಇಲ್ಲದೆ ಡಿಲೀಟ್ ಮಾಡಿದರೆ ಅವರ ಮೇಲೆ ಕ್ರಮಕೈಗೊಳ್ಳಿ. ಈ ಬಗ್ಗೆ ಬಿಎಲ್ ಒ ಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅವರು ಹೇಳಿದರು.
ಹೆಸರು ಸೇರ್ಪಡೆಗೆ ಅವಕಾಶ : ಮತದಾರರ ಮಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ ಇದೆ. 1.1.2024 ಕ್ಕೆ 18 ವರ್ಷ ತುಂಬುವವರು ಕೂಡ ಅರ್ಜಿ ಸಲ್ಲಿಸಬಹುದು. ಅವರಿಗೆ ಯಾವಾಗ 18 ತುಂಬುತ್ತದೋ ಆಗ ಅಟೋಮೆಟೀಕ್ ಆಗಿ ಸೇರ್ಪಡೆ ಆಗುತ್ತದೆ ಎಂದು ಅವರು ಹೇಳಿದರು.