ಸುಬ್ರಹ್ಮಣ್ಯ : ಎಸ್.ಎಸ್.ಪಿ.ಯು ಕಾಲೇಜು ಪ್ರೌಢಶಾಲೆ – ಪ್ರತಿಭಾ ಪ್ರದರ್ಶನ ಕಾರ್ಯಕ್ರಮ

0

ಎಸ್ .ಎಸ್ .ಪಿ.ಯು ಕಾಲೇಜು ಸುಬ್ರಹ್ಮಣ್ಯ, ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಜು.15 ರಂದು ನಡೆಯಿತು. ಅಧ್ಯಕ್ಷತೆಯನ್ನು ಮುಖ್ಯೋಪಾದ್ಯಾಯರಾದ ಯಶವಂತ. ರೈ. ಕೆ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ ಶಿಕ್ಷಕ ದುಗ್ಗಪ್ಪ ಹಾಲೆಮಜಲು, ಯಕ್ಷಗಾನ ಕಲಾವಿದೆ , ಉಪನ್ಯಾಸಕಿ ಭವ್ಯಶ್ರೀ ಕುಲ್ಕುಂದ ಉಪಸ್ಥಿತರಿದ್ದರು . ವಿದ್ಯಾರ್ಥಿ ಕಲಾವಿದರು ಪಂಚವಾದ್ಯಗಳನ್ನು ನುಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.

23 ಸ್ಪರ್ಧೆಗಳು ನಡೆದು ಸುಮಾರು 230 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಸಂಭ್ರಮಪಟ್ಟರು. ಎಲ್ಲಾ ಶಿಕ್ಷಕರು ಸಹಕರಿಸಿದರು.