ಭಾರೀ ಮಳೆಗೆ ದಬ್ಬಡ್ಕ ಸೇತುವೆ ಸಂಪೂರ್ಣ ಮುಳುಗಡೆ : ಸಂಪರ್ಕ ಕಡಿತ

0


ಕಳೆದ ಎರಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ದಬ್ಬಡ್ಕ ಊರಿನ ಪ್ರಮುಖ ಸೇತುವೆ ಮುಳುಗಡೆಯಾಗಿದ್ದು, ಸಂಪರ್ಕ ಕಳೆದುಕೊಂಡಿದೆ. ಈ ಸೇತುವೆಯು ಕಲ್ಲು ಗುಂಡಿಗೆ ಹೋಗಲು ಪ್ರಮುಖ ಆಧಾರವಾಗಿದ್ದು ಇದೀಗ ಜನರು ಕಲ್ಲು ಗುಂಡಿಗೆ ಹೋಗಲು ಹರಸಾಹಸ ಪಡುವಂತಾಗಿದೆ. ಇದೊಂದು ಮುಳುಗು ಸೇತುವೆಯಾಗಿದ್ದು ಪ್ರತಿ ವರ್ಷವೂ ಮಳೆಗಾಲ ಜನರು ಪೇಟೆಗೆ ಹೋಗಲು ಕಷ್ಟಪಡುತ್ತಿದ್ದಾರೆ.

ಜನರಿಗೆ ದೊಡ್ಡ ಸೇತುವೆಯ ಅವಶ್ಯಕತೆ ತುಂಬಾ ಇದೆ ಎಂದು ಆ ಭಾಗದ ಜನರು ಆಗ್ರಹಿಸಿದ್ದಾರೆ.