ಎರಡನೇ ದಿನವೂ ಸುಬ್ರಹ್ಮಣ್ಯ ಪಂಜ ಮಂಜೇಶ್ವರ ರಸ್ತೆ ಬ್ಲಾಕ್
ಜನರನ್ನು ದಾಟಿಸಿ ನೆರವಾದ ಎಸ್ ಡಿ ಆರ್ ಎಫ್
ಸುಬ್ರಹ್ಮಣ್ಯ ಪರಿಸರ ಸೇರಿದಂತೆ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು ಕುಕ್ಕೆ ಸುಬ್ರಹ್ಮಣ್ಯ ದ ಕುಮಾರಧಾರಾ ಸ್ನಾನಘಟ್ಟ ಇಂದು ಕೂಡ ದಿನವೀಡಿ ಸಂಪೂರ್ಣ ಮುಳುಗಡೆಯಾಗಿತ್ತು.
ಸುಬ್ರಹ್ಮಣ್ಯ ಪಂಜ ಮಂಜೇಶ್ವರ ರಸ್ತೆಯ ಮೇಲೆಯೂ ನೀರು ನಿನ್ನೆಯೇ ಆವರಿಸಿದ್ದು ಇಂದು ಬೆಳಗೊಮ್ಮೆ ನೀರು ಸ್ವಲ್ಪ ಕಡಿಮೆಯಾಗಿತ್ತು. ಬಳಿಕ ಮತ್ತೆ ನೀರಿನ ಮಟ್ಟ ಏರಿದೆ.
ಸಂಜೆಗಾಗುವಾಗ ನೀರಿನ ಹರಿವು ಹೆಚ್ಚಾಗಿದ್ಧು ಕರ್ತವ್ಯದ ನೆಲೆಯಲ್ಲಿ ಸುಬ್ರಹ್ಮಣ್ಯ ಆಗಮಿಸಿದವರನ್ನು ಎಸ್ ಡಿ ಆರ್ ಎಫ್ ಮತ್ತು ಭದ್ರತಾ ಸಿಬ್ಬಂದಿಗಳಿದ್ದು ನೀರು ಬಂದಿ ರಸ್ತೆ ಬ್ಲಾಕ್ ಆದಲ್ಲಿ ದಾಟಿಸಿ ಮನೆಗೆ ತೆರಳುವ ವ್ಯವಸ್ಥೆ ಮಾಡಿದರು.