ಅಮರ ಸಂಘಟನಾ ಸಮಿತಿ ಆಯೋಜನೆ
ಕೆಸರುಗದ್ದೆ ಕ್ರೀಡೆಯಲ್ಲಿ ರೋಟರಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಭಾಗಿ
ಮರ್ಕಂಜದ ಪನ್ನೆಬೈಲು ಎಂಬಲ್ಲಿ ಅಮರ ಸಂಘಟನಾ ಸಮಿತಿ ಸುಳ್ಯ , ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಸುಳ್ಯ ಹಾಗೂ ನಾಗ ಸಾನಿಧ್ಯ, ಗುಳಿಗ ಸಾನಿಧ್ಯ ಮರ್ಕಂಜ ಇದರ ಸಂಯುಕ್ತ ಆಶ್ರಯದಲ್ಲಿ 4ನೇ ವರ್ಷದ ‘ಕಂಡಡೊಂಜಿ ದಿನ-ಬಲೇ ಗೊಬ್ಬೂಗ’ ಕಲಾಕ್ರೀಡೊತ್ಸವ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಜು
23 ರಂದು ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಚಾರೀಟೇಬಲ್ ಟ್ರಸ್ಟ್ ಚೇರ್ಮನ್ ರೊ.ಆನಂದ ಖಂಡಿಗ ಹಾಗೂ ಸಮಾರೋಪದ ಅಧ್ಯಕ್ಷತೆಯನ್ನು ಅಮರ ಸಂಘಟನಾ ಸಮಿತಿ ಸುಳ್ಯದ ಅಧ್ಯಕ್ಷ ಪ್ರವೀಣ್ ಕುಲಾಲ್ ವಹಿಸಿದ್ದರು.
ರೋಟರಿ ವಿದ್ಯಾಸಂಸ್ಥೆಯ ಸಂಚಾಲಕರಾದ ಗಿರಿಜಾ ಶಂಕರ ತುದಿಯಡ್ಕ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾದ ರಮೇಶ ಗೌಡ ಎಂ, ಕೃಷಿ ಮೇಲ್ವಿಚಾರಕ ಕ್ಷೇ.ಧ.ಗ್ರಾ.ಅ. ಯೋಜನೆ ಬಿ ಸಿ ಟ್ರಸ್ಟ್ ಸುಳ್ಯ , ಗದ್ದೆ ಮಾಲಕರಾದ ಅಂಬಾಡಿ ಪನ್ನೆಯವರು, ರೋಟರಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಬೊಮ್ಮೆಟ್ಟಿ, , ರೋಟರಿ ಚಾರೀಟೇಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ಪ್ರಭಾಕರನ್ ನಾಯರ್, ರೋಟರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹರಿಣಾಕ್ಷಿ ಕೆ ಇವರೆಲ್ಲ ವಿದ್ಯಾರ್ಥಿಗಳಿಗೆ ಗದ್ದೆ ಮತ್ತು ಕೃಷಿಯ ಮಹತ್ವ ತಿಳಿಸಿದರು.
ಅಮರ ಸಂಘಟನಾ ಸಮಿತಿಯ ಕೋಶಾಧಿಕಾರಿರಜನಿಕಾಂತ್ ಉಮ್ಮಡ್ಕ ಅಮರ ಸಂಘಟನೆಯ ಕುರಿತು ಮಾತನಾಡಿದರು. ವಿದ್ಯಾರ್ಥಿಗಳಿಗೆ ಹಳ್ಳಿ ಜನಪದ ವಿಶೇಷ ಕ್ರೀಡೆಯಾದ ಕಂಬಳ ಮತ್ತು ನೇಗಿಲ ಹಿಡಿದು ಗದ್ದೆ ಉಳುಮೆ ಮಾಡುವುದು, ಪಾರ್ದನ ಹಾಡಿನೊಂದಿಗೆ ನೇಜಿ ನೆಡುವ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು. ಸಮಾರೋಪದ ಮುಖ್ಯ ಅತಿಥಿಗಳಾಗಿ ಮಾಜಿಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ಮತ್ತು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರ ಸೀತಾರಾಮ ರೈ, ರೋಟರಿ ವಿದ್ಯಾಸಂಸ್ಥೆಯ ಮಾಜಿ ಸಂಚಾಲಕರು ಹಾಗೂ ರೋಟರಿ ಚಾರೀಟೇಬಲ್ ಟ್ರಸ್ಟ ನ ಟ್ರಸ್ಟಿ ಕ್ರೀಡೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ, ಕಾರ್ಯಕ್ರಮದ ಮಹತ್ವ ತಿಳಿಸಿದರು. ಸಮಾರೋಪ ಸಮಾರಂಭದ ಅತಿಥಿಗಳಾದ ಪದ್ಮನಾಭ ಶೆಟ್ಟಿ ಬಲ್ನಾಡಪೇಟೆ, ಸದಸ್ಯರು ಶ್ರೀ ಕ್ಷೇ.ಧರ್ಮಸ್ಥಳ ತಾಲ್ಲೂಕು ಜನ ಜಾಗೃತಿ ವೇದಿಕೆ ಸುಳ್ಯ, ಗೋವಿಂದ ಅಲವುಪಾರೆ,ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಮರ್ಕಂಜ, ರೋಟರಿ ವಿದ್ಯಾಸಂಸ್ಥೆಯ ಮಾಜಿ ಸಂಚಾಲಕರಾದ ರೊ. ಬಾಪು ಸಾಹೇಬ್, ಶಾಂತಪ್ಪ ರೈ ಅಂಗಡಿಮಜಲು,ಅಧ್ಯಕ್ಷರು ಎಸ್ ಡಿ ಎಂ ಸಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸೇವಾಜೆ ವಿದ್ಯಾರ್ಥಿಗಳಿಗೆ ಪಾರಂಪರಿಕ ಕೃಷಿಯ ಬಗ್ಗೆ ಮಾಹಿತಿ ನೀಡಿದರು.
ಉದ್ಘಾಟನ ಸಮಾರಂಭದಲ್ಲಿ ವಿದ್ಯಾರ್ಥಿನಿ ನೇಹ ಕೆ ಎ ಸ್ವಾಗತಿಸಿ ,ವಿದ್ಯಾರ್ಥಿ ಅಕ್ಷತ್ ಕುಮಾರ ವಂದಿಸಿದರು. ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿನಿ ಅನನ್ಯ ಕೆ ಬಿ ಸ್ವಾಗತಿಸಿ ,ಉಪನ್ಯಾಸಕಿ ಜ್ಯೋತ್ಸ್ನ ಕೆ ವಂದಿಸಿದರು. ವಿದ್ಯಾರ್ಥಿನಿ ರಮ್ಯ ಪಾರ್ವತಿ ಮತ್ತು ಬಳಗ ಕಾರ್ಯಕ್ರಮದಲ್ಲಿ ಪ್ರಾರ್ಥನೆ ಹಾಡು ಹಾಡಿದರು ವಿದ್ಯಾರ್ಥಿ ಆಕಾಶ್ ಎನ್ ಎಸ್ ಭಟ್ ಮತ್ತು ವಿದ್ಯಾರ್ಥಿನಿ ಚೈತನ್ಯ ಯು ಹಾಗೂ ಅಮರ ಸಂಘಟನೆಯ ತೀರ್ಥೇಶ್ ನಾರ್ಣಕಜೆ, ಶಶಿಕಾಂತ ಮಿತ್ತೂರು ಮತ್ತು ನವೀನ್ ಬಾಂಜಿಕೋಡಿ ಕಾರ್ಯಕ್ರಮ ನಿರೂಪಿಸಿದರು.