ಎಂ ಜಿ ಕಜೆ ದ. ಕೊರಿಯಾಕ್ಕೆ

0

ದ ಕ ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಕಜೆಯವರು ಆಗಸ್ಟ್ ೧ರಿಂದ ೧೨ರ ವರೆಗೆ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ವಿಶ್ವ ಸ್ಕೌಟ್ಸ್ ಜಾಂಬೂರಿ (ಸಮಾವೇಶ) ದಲ್ಲಿ ಭಾಗವಹಿಸಲು ದಕ್ಷಿಣ ಕೊರಿಯಾಕ್ಕೆ ಹೋಗುತ್ತಿದ್ದಾರೆ.


ದ. ಕ. ಜಿಲ್ಲೆಯಿಂದ ಮಕ್ಕಳು ಮತ್ತು ಶಿಕ್ಷಕರು ಸೇರಿ ಒಟ್ಟು ೫೮ ಮಂದಿ ಶಿಬಿರಾರ್ಥಿಗಳಾಗಿ ಭಾಗವಹಿಸುತ್ತಿದ್ದು, ಅವರೆಲ್ಲ ಜುಲೈ ೩೧ ರಂದು ಪ್ರಯಾಣ ಬೆಳೆಸುತ್ತಿದ್ದಾರೆ. ಎಂ.ಜಿ. ಕಜೆಯವರು ಆಗಸ್ಟ್ ೬ ರಂದು ಮಂಗಳೂರಿನಿಂದ ಪ್ರಯಾಣ ಬೆಳೆಸುವರು.