ಮುರುಳ್ಯ ಗ್ರಾಮದ ಪೂದೆ ಶ್ರೀ ಗಣಪತಿ ಮಲ್ಲಿಕಾರ್ಜುನ ದೇವಸ್ಥಾನ ಮತ್ತು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜುಲೈ 30ರಂದು ವಿವಿಧ ಧಾರ್ಮಿಕ ಪೂಜೆಗಳಾದ ಬಲಿವಾಡ ಸೇವೆ, ಅಪ್ಪ ಸೇವೆ, ಹಾಲು ಪಾಯಸ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ಬಳಿಕ ಶಾಸಕಿ ಭಾಗೀರಥಿ ಮುರುಳ್ಯರವರ ಅಧ್ಯಕ್ಷತೆಯಲ್ಲಿ ಜೀರ್ಣೋದ್ಧಾರ ಸಮಿತಿ ಮತ್ತು ಭಕ್ತಾದಿಗಳ ಸಭೆ ನಡೆಯಿತು.
ವೇದಿಕೆಯಲ್ಲಿ ಕಾವಾಜೆ ಲಕ್ಷ್ಮೀನರಸಿಂಹ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಪಿ. ರಾಮಚಂದ್ರ ಭಟ್ ದೇವಸ್ಯ, ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ದೇವಸ್ಥಾನ ಸಮಿತಿ ಅಧ್ಯಕ್ಷ ವಸಂತ ನಡುಬೈಲು, ನ್ಯಾಯವಾದಿ ಜಗದೀಶ್ ಹುದೇರಿ, ಪುಟ್ಟಣ್ಣ ಆಚಾರ್ಯ ಪೂದೆ, ಮುರುಳ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವನಿತಾ ಬಾಮೂಲೆ, ಶ್ರೀನಾಥ್ ಬಾಳಿಲ, ಕಂಟ್ರಾಕ್ಟರ್ ರಘುನಾಥ ಉಪ್ಪಂಗಳ, ಅವಳಿ ದೇವಸ್ಥಾನದ ಅಧ್ಯಕ್ಷರುಗಳಾದ ಪದ್ಮನಾಭ ಪೂದೆ, ಭುವನೇಶ್ವರ ಪೂದೆ ಇದ್ದರು. ಪ್ರದೀಪ್ ಎಣ್ಮೂರು ಕಾರ್ಯಕ್ರಮ ನಿರೂಪಿಸಿದರು. ಶ್ರೀ ಮಹಾವಿಷ್ಣು ದೇವಸ್ಥಾನದ ಅಧ್ಯಕ್ಷ ಭುವನೇಶ್ವರ ಪೂದೆ ಸ್ವಾಗತಿಸಿದರು.