ನಾಳೆ ( ಜು. 31) : ಆಲಂತ್ತಡ್ಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಮೀನಾಕ್ಷಿ ಚಂದ್ರಶೇಖರ ನರಿಯೂರು ನಿವೃತ್ತಿ

0

ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಆಲಂತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಮೀನಾಕ್ಷಿ ನರಿಯೂರುರವರು ಸುಧೀರ್ಘ 29 ವರ್ಷಗಳ ಸೇವೆಯಿಂದ ನಾಳೆ (ಜು. 31ರಂದು) ನಿವೃತ್ತರಾಗಲಿದ್ದಾರೆ.

1994ರಲ್ಲಿ ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಗಡಿಯಾರ ಸರಕಾರಿ ಶಾಲೆಯಲ್ಲಿ ದೈ.ಶಿ. ಶಿಕ್ಷಕಿಯಾಗಿ ಸೇವೆ ಆರಂಭಿಸಿದ ಇವರು ಅಲ್ಲಿ ಸುಮಾರು 4 ವರ್ಷಗಳ ಸೇವೆ ಸಲ್ಲಿಸಿ, ಬಳಿಕ ಐವರ್ನಾಡು ಶಾಲೆಯಲ್ಲಿ 5 ವರ್ಷ, ಪರ್ಪುಂಜ ಶಾಲೆಯಲ್ಲಿ 6 ವರ್ಷ ಸೇವೆ ಸಲ್ಲಿಸಿದ್ದಾರೆ.

ಆಲಂತ್ತಡ್ಕ ಶಾಲೆಯಲ್ಲಿ ಸುಮಾರು 14 ವರ್ಷ ಸೇವೆಯಲ್ಲಿದ್ದ ಅವರು ನಾಳೆ ( ಜು. 31 ) ನಿವೃತ್ತರಾಗುತ್ತಿದ್ದಾರೆ.

ಅನೇಕ ವಿದ್ಯಾರ್ಥಿಗಳನ್ನು ಕ್ರೀಡಾ ಕ್ಷೇತ್ರಗಳಲ್ಲಿ ಪಳಗಿಸಿದ ಕೀರ್ತಿ ಇವರದ್ದು.

ಮೂಲತಃ ಕನಕಮಜಲು ಗ್ರಾಮದ ನರಿಯೂರಿನ ದಿ. ಚಂದ್ರಶೇಖರರವರ ಪತ್ನಿಯಾಗಿರುವ ಇವರು ಪ್ರಸ್ತುತ ಈಶ್ವರಮಂಗಲದ ಪುಂಡಿಕಾಯಲ್ಲಿ ನೆಲೆಸಿದ್ದಾರೆ. ಹಿರಿಯ ಪುತ್ರ ಗೌತಮ್ ಉಡುಪಿಯ ಆಕಾಶ್ ಬಿಜ್ಯುಶ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ. ಸೊಸೆ ಶ್ರೀಮತಿ ಸೌಮ್ಯ.

ಕಿರಿಯ ಪುತ್ರ ಗೌರವ್ ಪೆರ್ನಾಜೆ ಗೌತಮ್ ಪ್ರಿಂಟರ್‍ಸ್ ಹಾಗೂ ಕಾವುನಲ್ಲಿ ಮೆಡಿಫ್ಲೆಕ್ಸ್ ಲ್ಯಾಬ್ ನಡೆಸುತ್ತಿದ್ದಾರೆ.

ಶ್ರೀಮತಿ ಮೀನಾಕ್ಷಿಯವರು ಕೋಲ್ಚಾರಿನ ದಿ. ಕೊರಗಪ್ಪ ಮತ್ತು ದಿ. ಸೀತಮ್ಮ ದಂಪತಿಯ ಪುತ್ರಿ.