ಭಾರತೀಯ ವೈದ್ಯಕೀಯ ಸಂಘ , ಸುಳ್ಯ ಶಾಖೆ ಮತ್ತು ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದೊಂದಿಗೆ 32ನೇ ವೈದ್ಯರ ದಿನಾಚರಣೆ ಜು. 30ರಂದು ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಆಡಿಟೋರಿಯಂನಲ್ಲಿ ನಲ್ಲಿ ನಡೆಯಿತು.
ಥಟ್ ಅಂತ ಹೇಳಿ ಖ್ಯಾತಿಯ ಡಾ. ನಾ. ಸೋಮೇಶ್ವರ ಮುಖ್ಯ ಅತಿಥಿಯಾಗಿ ಭಾಗವಹಿಸಿ ವೈದ್ಯರ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿದರು.
ವೈದ್ಯಕೀಯ ಸಂಘ ಸುಳ್ಯ ಶಾಖೆಯ ಅಧ್ಯಕ್ಷೆ ಡಾ. ವೀಣಾ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚರ್ಮರೋಗ ತಜ್ಞರಾದ ಡಾ. ಗಣೇಶ್ ಭಟ್ ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮಕ್ಕಳ ತಜ್ಞ ಸಂಘದ ಪೂರ್ವಾಧ್ಯಕ್ಷ ಡಾ. ಶ್ರೀಕೃಷ್ಣ ಭಟ್ ಸನ್ಮಾನಿತರನ್ನು ಪರಿಚಯಿಸಿದರು. ಡಾ. ಉಮಾಶಂಕರ್ ಡಾ. ಗಣೇಶ್ ಭಟ್ಟರ ಸನ್ಮಾನ ಪತ್ರ ವಾಚಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾರ್ಯದರ್ಶಿ ಡಾ. ರಜನಿ ಧ್ವಜವಂದನೆಯೊಂದಿಗೆ ಪ್ರಮಾಣ ವಚನ ಮಾಡಿದರು. ಸಂಘದ ಉಪಾಧ್ಯಕ್ಷ ಡಾ. ಕರುಣಾಕರ್ ಸ್ವಾಗತಿಸಿದರು. ಡಾ. ವೀಣಾ ರಚಿಸಿದ ಹಾಡನ್ನು ಹಾಡುವ ಮೂಲಕ ಕ್ಷಮಾ ಪ್ರಾರ್ಥಸಿದರು. ಡಾ. ಶೃತಿ ರೈ ಡಾ. ಬಿ.ಸಿ. ರಾಯ್ ಬಗ್ಗೆ ಮಾತನಾಡಿದರು. ಡಾ. ವೆಂಕಟಕೃಷ್ಣ ವಂದಿಸಿದರು. ಡಾ. ವೀಣಾ ರಚಿಸಿದ ಕವನ ಸಂಕಲನವನ್ನು ಡಾ. ನ. ಸೋಮೇಶ್ವರ ಬಿಡುಗಡೆ ಮಾಡಿದರು. ಬಳಿಕ 6 ಮಂದಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಮಧ್ಯಾಹ್ನ ವೈದ್ಯ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಕಾರ್ಯಕ್ರಮವನ್ನು ಡಾ. ನಾ. ಸೋಮೇಶ್ವರ ನಡೆಸಿಕೊಟ್ಟರು.