ಸುಳ್ಯಅಮರ ಸಂಘಟನಾ ಸಮಿತಿ ಇದರ ಆಶ್ರಯದಲ್ಲಿ
ಜು.30 ರಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟ ವಿದ್ಯಾರ್ಥಿ – ವಿದ್ಯಾರ್ಥಿನಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಅಮರ ಕಪ್-2023 ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ಕುರುಂಜಿಗುಡ್ಡೆಯಲ್ಲಿ ನಡೆಯಿತು.
ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಪಂದ್ಯಾಟವನ್ನು ಉದ್ಘಾಟಿಸಿದರು.
ವೇದಿಕೆಯಲ್ಲಿ ಅಮರ ಸಂಘಟನಾ ಸಮಿತಿ ಸ್ಥಾಪಕಾಧ್ಯಕ್ಷ ಪ್ರದೀಪ್ ಬೊಳ್ಳೂರು,
ಪೆರುವಾಜೆ ಪಂಚಾಯತ್ ಸಿಬ್ಬಂದಿ ಅಕ್ಷತಾ ನಾಗನಕಜೆ, ದೈಹಿಕ ಶಿಕ್ಷಣ ಶಿಕ್ಷಕ ಮಿತನ್ ಎಸ್, ಅಮರ ಸಂಘಟನಾ ಸಮಿತಿ ಗೌರವಾಧ್ಯಕ್ಷ ಕುಸುಮಾಧರ ಮುಕ್ಕೂರು
ದೈಹಿಕ ಶಿಕ್ಷಣ ಶಿಕ್ಷಕ ರಂಗನಾಥ ನಾಗಪಟ್ಟಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭ: ಅಧ್ಯಕ್ಷತೆಯನ್ನು ಅಮರ ಸಂಘಟನಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಲಾಲ್ ವಹಿಸಿದ್ದರು. ಯುವಜನ ಸಂಯುಕ್ತಮಂಡಳಿ ಅಧ್ಯಕ್ಷ ತೇಜಸ್ವಿ ಕಡಪಳ, ನಿಕಟ ಪೂರ್ವ ಅಧ್ಯಕ್ಷ ಅನಿಲ್ ಪೂಜಾರಿಮನೆ, ರಾಜ್ ಸೌಂಡ್ಸ್ ಮಾಲಕ ರಾಜೇಶ್ ರೈ ಉಬರಡ್ಕ, ಗರುಡ ಯುವಕ ಮಂಡಲದ ಅಧ್ಯಕ್ಷ ಮನೋಜ್ ಪಡ್ಪು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಿಥುನ್ ಕೆರೆಗದ್ದೆ ಸ್ವಾಗತಿಸಿದರು. ಸಾತ್ವಿಕ್ ಮಡಪ್ಪಾಡಿ ವಂದಿಸಿದರು. ತೀರ್ಥೆಶ್ ಯಾದವ್ ನಾರ್ಣಕಜೆ ಕಾರ್ಯಕ್ರಮ ನಿರೂಪಿಸಿದರು.
ಪಂದ್ಯಾಟದಲ್ಲಿ 16ವರ್ಷದ ಕೆಳಗಿನ ವಿದ್ಯಾರ್ಥಿಗಳ ವಿಭಾಗದಲ್ಲಿ ಸೈಂಟ್ ಜೋಸೆಫ್ ಸುಳ್ಯ (ಪ್ರ)
ಜೆ.ಸಿ ಸುಳ್ಯ(ದ್ವಿ)
ವಿದ್ಯಾರ್ಥಿನಿಯರ ವಿಭಾಗ K.B.Aಸುಬ್ರಹ್ಮಣ್ಯ(ಪ್ರ)
ನೇಸರ ಸುಳ್ಯ(ದ್ವಿ)
20 ವರ್ಷದ ಕೆಳಗಿನ ವಿದ್ಯಾರ್ಥಿಗಳ ವಿಭಾಗ
K.B.A ಸುಬ್ರಹ್ಮಣ್ಯ(ಪ್ರ)
S.F.C ಕೂಟೇಲು(ದ್ವಿ)
ವಿದ್ಯಾರ್ಥಿನಿಯರ ವಿಭಾಗ
ಪವರ್ ಶಟ್ಲರ್ಸ್ (ಪ್ರ)
ಅನಾನ್ಸಿ(ದ್ವಿ) ಸ್ಥಾನ ಪಡೆದುಕೊಂಡಿತು.