ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ವತಿಯಿಂದ ಸನ್ಮಾನ
ಜಾಲ್ಸೂರಿನ ಪಯಸ್ವಿನಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸುದೀರ್ಘ ಸೇವೆ ಸಲ್ಲಿಸಿ, ಜು.31ರಂದು ನಿವೃತ್ತರಾದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕುಸುಮಾವತಿ ಯು.ಪಿ. ಅವರಿಗೆ ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ವತಿಯಿಂದ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭವು ಜು.31ರಂದು ಅಪರಾಹ್ನ ಜರುಗಿತು.
ಸುದೀರ್ಘ 32 ವರ್ಷಗಳ ಅವಧಿಗೆ ಶಾಲೆಯಲ್ಲಿ ಸಹಶಿಕ್ಷಕಿಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿದ್ದ ಶ್ರೀಮತಿ ಕುಸುಮಾವತಿ ಯು. ಪಿ. ಹಾಗೂ ಅವರ ಪತಿ ಸುಳ್ಯ ಪಿ.ಎಲ್.ಡಿ. ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿರುವ ಬಾಲಕೃಷ್ಣ ಗೌಡ ಅರಿಯಡ್ಕ ದಂಪತಿಗಳನ್ನು ಜಾಲ್ಸೂರಿನ ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ (ರಿ.) ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಅವರು ಸನ್ಮಾನಿಸಿ, ಗೌರವಿಸಿದರು.
ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡರು ಅಧ್ಯಕ್ಷತೆ ವಹಿಸಿದ್ದರು. ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಸಂಚಾಲಕರಾದ ಜಾಕೆ ಸದಾನಂದ ಗೌಡರು ಮಾತನಾಡಿ 1991ರಲ್ಲಿ ಜಾಲ್ಸೂರಿನಲ್ಲಿ ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ವತಿಯಿಂದ ಆರಂಭವಾದ ಪಯಸ್ವಿನಿ ಪ್ರೌಢಶಾಲೆಯ ಆರಂಭದ ದಿನಗಳಿಂದಲೂ ಜೊತೆಗಿದ್ದು, ಸಹಶಿಕ್ಷಕಿಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿದ ಶ್ರೀಮತಿ ಕುಸುಮಾವತಿ ಯು.ಪಿ. ಅವರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಅರಂತೋಡು ನೆಹರೂ ಮೆಮೋರಿಯಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಕೆ.ಆರ್. ಗಂಗಾಧರ್ ಅವರು ಅಭಿನಂಧನಾ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಜಾಲ್ಸೂರು ಗ್ರಾ.ಪಂ. ಅಧ್ಯಕ್ಷ ಕೆ.ಎಂ. ಬಾಬು ಕದಿಕಡ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ
ಜಾಕೆ ಸದಾನಂದ ಗೌಡ, ಶ್ರೀಮತಿ ಕುಸುಮಾವತಿ ಯು. ಪಿ. ಉಪಸ್ಥಿತರಿದ್ದರು.
ಶ್ರೀಮತಿ ಕುಸುಮಾವತಿ ಯು.ಪಿ. ದಂಪತಿಗಳನ್ನು ಶಾಲಾ ಅಧ್ಯಾಪಕರ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಸನ್ಮಾನಿಸಿ, ಬೀಳ್ಕೊಟ್ಟರು.
ಕಾರ್ಯಕ್ರಮದಲ್ಲಿ ಪಯಸ್ವಿನಿ ಎಜ್ಯುಕೇಶನ್ ಸೊಸೈಟಿಯ ಉಪಾಧ್ಯಕ್ಷ ಕತ್ತರ್ ಇಬ್ರಾಹಿಂ, ಕೋಶಾಧಿಕಾರಿ ಟಿ. ಶ್ರೀನಿವಾಸ ಭಟ್, ಕೆ.ಬಿ. ನಿರ್ದೇಶಕರುಗಳಾದ ರಾಮಚಂದ್ರ ಗೌಡ ಬುಡ್ಲೆಗುತ್ತು, ರಾಮಚಂದ್ರ ಪಾಟಾಳಿ ಮಹಾಬಲಡ್ಕ, ಜಯರಾಮ ರೈ ಜಾಲ್ಸೂರು, ಎಂ.ಎಸ್. ಶ್ಯಾಮ್ ಕುಮಾರ್ ಮರಸಂಕ, ಸದಾನಂದ ಮಾವಜಿ, ಕೆ. ಮೋನಪ್ಪ ಕದಿಕಡ್ಕ, ವಸಂತ ಗೌಡ ಕೇಪು ಸೇರಿದಂತೆ ಪೋಷಕರು ಸಹಶಿಕ್ಷಕ ವೃಂದದವರು , ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಿರ್ದೇಶಕರುಗಳಾದ ರಾಮಚಂದ್ರ ಗೌಡ ಬುಡ್ಲೆಗುತ್ತು ಅವರು ಸ್ವಾಗತಿಸಿ , ಜಯರಾಮ ರೈ ಜಾಲ್ಸೂರು ವಂದಿಸಿದರು. ಸಹಶಿಕ್ಷಕ ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.