ರಾಜ್ಯಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ ಅಶ್ವಿಕ ಕೆ.ಯವರಿಗೆ ಬಹುಮಾನ

0

ಬೆಂಗಳೂರಿನ ಶ್ರೀರಾಜೇಶ್ವರಿ ವಿದ್ಯಾ ಶಾಲಾ ಕೆಂಚೇನಹಳ್ಳಿ ಇಲ್ಲಿ ಜು.30 ರಂದು ಆಯೋಜನೆ ಮಾಡಿದ
ರಾಜ್ಯ ಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ ನಿರಂತರ ಯೋಗ ಕೇಂದ್ರ ಏನೇಕಲ್ಲಿನ ವಿದ್ಯಾರ್ಥಿನಿ ಅಶ್ವಿಕ. ಕೆ 5ನೇ ಸ್ಥಾನ ಪಡೆದಿದ್ದಾರೆ.

ಆಚಾರ್ಯ ಯೋಗ ಯೂತ್ ಕ್ಲಬ್ ಬೆಂಗಳೂರು ಇವರು ನಡೆಸಿದ ಸ್ಪರ್ಧೆಯ
8 ವರ್ಷದ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಅಶ್ವಿಕ ಈ ಬಹುಮಾನ ಪಡೆದಿದ್ದಾರೆ.
ಯೋಗ ಗುರು ಶರತ್ ಮರ್ಗಿಲಡ್ಕ ತರಬೇತಿ ನೀಡಿರುವ ಇವರು ಏನೆಕಲ್ಲು ಗ್ರಾಮದ ಲೋಕೇಶ್ ಕಲ್ಲೇರಿ ಮತ್ತು ಕಿರಣ್ಯ ಕಲ್ಲೇರಿ ದಂಪತಿಗಳ ಪುತ್ರಿ. ಪ್ರಸ್ತುತ ಕುಮಾರ ಸ್ವಾಮಿ ವಿದ್ಯಾಲಯ, ಸುಬ್ರಹ್ಮಣ್ಯ ಇಲ್ಲಿನ 3 ನೇ ತರಗತಿಯ ವಿದ್ಯಾರ್ಥಿನಿ.