ಮರ್ಕಂಜ ಗ್ರಾಮದ ಸಂಕೇಶ ಪುರುಷೋತ್ತಮ ಪುರುಷ ಸಂಕೇಶ ಎಂಬವರ ಪುತ್ರ ಸುರೇಶ್ ಪುರುಷ ಎಂಬವರು ಇಂದು (ಆ.2) ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು.
ಸುರೇಶ್ ಪುರುಷ ರವರು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಮೆನೇಜರ್ ಆಗಿ ನಿವೃತ್ತಿ ಪಡೆದು ಮನೆಯಲ್ಲಿದ್ದರು.
ಮೃತರು ಪತ್ನಿ ಗೀತಾ, ಪುತ್ರ ವಿಜೇತ್ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.