ಮಣಿಪುರ ಘಟನೆಗಳನ್ನು ಖಂಡಿಸಿ ಸುಳ್ಯದಲ್ಲಿ ಕೈಸ್ತ ಬಾಂಧವರಿಂದ ಪ್ರತಿಭಟನಾ ಮೆರವಣಿಗೆ

0

ಮಣಿಪುರ ಸರ್ಕಾರದ ವಜಾಕ್ಕೆ ಆಗ್ರಹ

ಮಣಿಪುರದಲ್ಲಿ ಚರ್ಚ್‌ಗಳ ಮೇಲೆ ಹಾಗೂ ಕ್ರೈಸ್ತ ಧರ್ಮೀಯರ ಮೇಲೆ ನಿರಂತರವಾಗಿ ದಾಳಿ ಹಾಗೂ ದೌರ್ಜನ್ಯ ನಡೆಯುತ್ತಿದ್ದು, ಅದನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಮತ್ತು ಮಣಿಪುರ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಆಪಾದಿಸಿ,

ಕ್ರೈಸ್ತ ಧರ್ಮ ಗುರುಗಳು ಮತ್ತು ಕ್ರಿಶ್ಚಿಯನ್ ಸಮುದಾಯದವರು, ಇಂದು ಸುಳ್ಯದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರಲ್ಲದೆ,

ಮಣಿಪುರ ಸರ್ಕಾರವನ್ನು ವಜಾಗೊಳಿಸಬೇಕೆಂದು ರಾಷ್ಟ್ರಪತಿಗಳನ್ನು ಒತ್ತಾಯಿಸುವ ಮನವಿಯನ್ನು ತಹಶೀಲ್ದಾರರಿಗೆ ನೀಡಿದರು.

ಸುಳ್ಯದ ಸೈಂಟ್ ಬ್ರಿಜಿಡ್ ಚರ್ಚ್‌ನ ಬಳಿಯಿಂದ ಧರ್ಮ ಗುರುಗಳು ಮತ್ತು ಸಮಾಜದ ಮುಖಂಡರ ನೇತೃತ್ವದಲ್ಲಿ ಸುಳ್ಯದ ಮುಖ್ಯ ರಸ್ತೆಯಿಂದ ಸಾಗಿದ ಮೆರವಣಿಗೆಯು, ಸುಳ್ಯ ತಾಲೂಕು ಕಛೇರಿಯ ಮುಂಭಾಗ ಸಮಾವೇಶಗೊಂಡಿತು.

ಗುತ್ತಿಗಾರು ಚರ್ಚ್‌ನ ಧರ್ಮಗುರುಗಳಾದ ಫಾ| ಆದರ್ಶ ಜೋಸೆಫ್, ಸುಳ್ಯ ಚರ್ಚ್‌ನ ಧರ್ಮಗುರುಗಳಾದ ಫಾ| ವಿಕ್ಟರ್ ಡಿಸೋಜ, ಮಾಜಿ ಜಿಲ್ಲಾ ಲಯನ್ಸ್ ಗವರ್ನರ್ ಎಂ.ಬಿ.ಸದಾಶಿವ, ಸಿ.ಇ.ಟಿ.ಯು. ಅಧ್ಯಕ್ಷ ಕೆ.ಪಿ. ಜೋನಿ ಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಬಳಿಕ ಕ್ರೈಸ್ತ ಅಸೋಸಿಯೇಶನ್ ಅಧ್ಯಕ್ಷ ಬಿಟ್ಟಿ ಬಿ. ನೆಡುನಿಲಂರವರ ಉಪಸ್ಥಿತಿಯಲ್ಲಿ ತಹಶೀಲ್ದಾರ್ ಮಂಜನಾಥ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಜೂಲಿಯ ಕ್ರಾಸ್ತ ವಂದಿಸಿದರು. ಟಿ.ಐ.ಲೂಕಸ್ ಕಾರ್ಯಕ್ರಮ ನಿರೂಪಿಸಿದರು.