ಅಮರಮುಡ್ನೂರು ಗ್ರಾಮದ ಆರ್ನೋಜಿ ದಿ.
ಲಕ್ಷ್ಮಣ ಗೌಡರ ಪುತ್ರ ಹರೀಶ್ ಆರ್ನೋಜಿಯವರು ಅಲ್ಪಕಾಲದ ಅಸೌಖ್ಯದಿಂದ ಆ. 3 ರಂದು ಬೆಳಗಿನ ಜಾವ ಮಡಿಕೇರಿಯ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 65 ವರ್ಷ ವಯಸ್ಸಾಗಿತ್ತು.
ಸುಮಾರು 50 ವರ್ಷಗಳಿಂದ ಮಡಿಕೇರಿ ನಗರದಲ್ಲಿ ಟೈಲರ್ ಆಗಿದ್ದ ಅವರು ಜನಪ್ರಿಯ ರಾಗಿದ್ದರು.
ಮೃತರು ಪತ್ನಿ ಶ್ರೀಮತಿ ವಿಮಲಾ, ಪುತ್ರ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿರುವ ಅಶೋಕ್, ಸೊಸೆ ಶಿಕ್ಷಕಿ ಶ್ರೀಮತಿ ಸಂಧ್ಯಾ, ಸಹೋದರರಾದ ನಿವೃತ್ತ ಪಿಡಿಓ ಹೂವಪ್ಪ ಗೌಡ, ಡೀಯಪ್ಪ ಗೌಡ, ಸಹೋದರಿ ಶ್ರೀಮತಿ ನಳಿನಿ ಪದ್ಮನಾಭ ಕೆದ್ಕನ, ಮೊಮ್ಮಕ್ಕಳು ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.