ಸುಜಿತ್ ರೈ ಕೊಡೆಂಕಿರಿ ನಿಧನ

0

ಬಾಳಿಲ ಗ್ರಾಮದ ಕೊಡೆಂಕಿರಿ ಸುಜಿತ್ ರೈಯವರು ಅಲ್ಪಕಾಲದ ಅಸೌಖ್ಯದಿಂದ ಆ.2 ರಂದು ರಾತ್ರಿ ನಿಧನರಾದರು.
ಅವರಿಗೆ 46 ವರ್ಷ ಪ್ರಾಯವಾಗಿತ್ತು.

ಮೃತರು ತಾಯಿ ಸುನಂದ ರೈ, ಪತ್ನಿ ಸುಪವಿತ್ರ, ಪುತ್ರಿ ತ್ವಿಷಾ ಹಾಗು ಸಹೋದರರಾದ ರಂಜಿತ್ ರೈ, ವಿಜಿತ್ ರೈ ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

ಬೆಳ್ತಂಗಡಿಯಲ್ಲಿ ವಾಸವಿದ್ದ ಇವರು ಅಸೌಖ್ಯಕ್ಕೊಳಗಾಗಿ ಇವರಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ವಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು.