ರಾಜ್ಯ ಮಟ್ಟದ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ ಸ್ಥಾನ ಪಡೆದ ನಿರಂತರ ಯೋಗ ಕೇಂದ್ರದ ವಿದ್ಯಾರ್ಥಿಗಳು

0

ಆಚಾರ್ಯ ಯೋಗ ಯೂತ್ ಕ್ಲಬ್(ರಿ.) ಬೆಂಗಳೂರು ಇವರು ಜು.30 ರಂದು ಬೆಂಗಳೂರಿನ ಶ್ರೀ ರಾಜೇಶ್ವರಿ ವಿದ್ಯಾ ಶಾಲಾ ಕೆಂಚೇನಹಳ್ಳಿ ಇಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್-2023 ರಲ್ಲಿ ನಿರಂತರ ಯೋಗ ಕೇಂದ್ರ ಸುಳ್ಯ ಹಾಗೂ ಕಡಬ ತಾಲೂಕಿನ ವಿದ್ಯಾರ್ಥಿಗಳಾದ 8 ವರ್ಷದ ವಯೋಮಿತಿಯ ಬಾಲಕರ ವಿಭಾಗದಲ್ಲಿ ಅಭಿನವ ಕೃಷ್ಣ 4ನೇ ಸ್ಥಾನ, ತರುಣ್ 5ನೇ ಸ್ಥಾನ.
8 ವರ್ಷದ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಅಶ್ವಿಕ.ಕೆ 5ನೇ ಸ್ಥಾನ, ಅಕ್ಷಯ.ಬಿ.ಎಮ್ 10ನೇ ಸ್ಥಾನ.
8 ರಿಂದ 10 ವರ್ಷದ ವಯೋಮಿತಿಯ ಬಾಲಕರ ವಿಭಾಗದಲ್ಲಿ ಪೂರ್ವಿತ್ 7ನೇ ಸ್ಥಾನ.
8 ರಿಂದ 10 ವರ್ಷದ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಅನ್ವಿತಾ ಶೆಟ್ಟಿ 10ನೇ ಸ್ಥಾನ.
10 ರಿಂದ 12 ವರ್ಷದ ವಯೋಮಿತಿಯ ಬಾಲಕರ ವಿಭಾಗದಲ್ಲಿ ದಕ್ಷ್ 9ನೇ ಸ್ಥಾನ.
10 ರಿಂದ 12 ವರ್ಷದ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಸಾನ್ವಿ.ಡಿ 5ನೇ ಸ್ಥಾನ ಹಾಗೂ ಗ್ರೇಡ್ ಸ್ಪರ್ಧೆಯಲ್ಲಿ ಅಶ್ವಿಕ.ಕೆ, ಅಕ್ಷಯ.ಬಿ.ಎಂ, ದಕ್ಷ್.ಕೆ, ಪ್ರಥಮ್ಯ.ಯು.ವೈ, ಜಗತ್.ಎಸ್.ಎಲ್, ತನ್ವಿ.ಎಚ್.ಜಿ, ಸುಖಿತಾ.ಬಿ, ಸುಭಿಕ್ಷಾ.ಬಿ, ಅಭಿನವ ಕೃಷ್ಣ.ಎಂ, ತರುಣ್.ಎ, ಪೂರ್ವಿತ್.ಐ.ಸಿ, ಸನತ್, ಜ್ಞಾನ್.ಬಿ.ಹೆಚ್, ಜಾಹ್ನವಿ.ಬಿ.ಹೆಚ್, ದಿಗಂತ್.ಎ.ಸಿ, ಸಾನ್ವಿ.ಡಿ, ಅನ್ವಿತಾ ಶೆಟ್ಟಿ “ಎ” ಮತ್ತು “ಎ ಪ್ಲಸ್” ಗಳಿಸಿರುತ್ತಾರೆ.
ವಿದ್ಯಾರ್ಥಿಗಳಿಗೆ ಯೋಗ ಗುರು ಶರತ್ ಮರ್ಗಿಲಡ್ಕ ತರಬೇತಿ ನೀಡಿರುತ್ತಾರೆ.