ಅಮರ ಪಡ್ನೂರು ಗ್ರಾಮದ ಚೊಕ್ಕಾಡಿ ಗರುಡ ಯುವಕ ಮಂಡಲ ಮತ್ತು ಮಯೂರಿ ಯುವತಿ ಮಂಡಲ ಇದರ ಜಂಟಿ ಆಶ್ರಯದಲ್ಲಿ ಕೆಸರುಡೊಂಜಿ ದಿನ 2023 ಕೆಸರುಗದ್ದೆ ಕ್ರೀಡಾಕೂಟ ವು ಆ. 13 ರಂದು ಚೆನ್ನಪರಿ ಅಚ್ಚಿಪಳ್ಳ ಗದ್ದೆಯಲ್ಲಿ ನಡೆಯಲಿರುವುದು.
ಬೆಳಗ್ಗೆ 8:00 ಗಂಟೆಗೆ ಪಂದ್ಯಾಟದ ಉದ್ಘಾಟನಾ ಸಮಾರಂಭ ಚೊಕ್ಕಾಡಿ ಉಳ್ಳಾಕುಲು ಯಾನೆ ನಾಯರ್ ದೈವಸ್ಥಾನದ ನಾಯರ್ ಪೂಜಾರಿ ಕುಸುಮಾಧರ ಕೊಳಂಬೆ ಉದ್ಘಾಟಿಸಲಿದ್ದಾರೆ. ಮಯೂರಿ ಯುವತಿ ಮಂಡಲದ ಅಧ್ಯಕ್ಷೆ ಸ್ವಾತಿ ಪದವು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಎಸ್.ಎನ್. ಮನ್ಮಥ, ಹರೀಶ್ ಕಂಪಿಲಿ, ಶ್ರೀಮತಿ ರೂಪವಾಣಿ, ಪದ್ಮ ಪ್ರಿಯ ಮೇಲ್ತೋಟ, ಶ್ರೀಮತಿ ಉಷಾಲತಾ ಪಡ್ಪು ಭಾಗವಹಿಸಲಿದ್ದಾರೆ.
ಸಂಜೆ ಸಮಾರೋಪ ಸಮಾರಂಭವು ಗರುಡ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶ್ರೀಧರ ಕರ್ಮಾಜೆ ಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವುದು. ಅತಿಥಿಗಳಾಗಿ ಶಾಸಕಿ ಭಾಗೀರಥಿ ಮುರುಳ್ಯ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಅಶೋಕ್ ಚೂಂತಾರು, ಯು.ಮಂ.ಅಧ್ಯಕ್ಷ ಮನೋಜ್ ಪಡ್ಪು, ಬೋಳಿಯಮ್ಮ ಅಚ್ಚಿಪಳ್ಳ, ಗಣೇಶ್ ಪಿಲಿಕಜೆ ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.
ಕೆಸರುಗದ್ದೆಯಲ್ಲಿ
ಸಾರ್ವಜನಿಕ ಪುರುಷರಿಗೆ ಹ್ಯಾಂಡ್ ಬಾಲ್, ಬೆರಿ ಚೆಂಡು, ಗುಂಪು ಓಟ, ಸಾರ್ವಜನಿಕ ಮಹಿಳೆಯರಿಗೆ ಹ್ಯಾಂಡ್ ಬಾಲ್ ,ಬೆರಿ ಚೆಂಡು, ಗುಂಪು ಓಟ, ಮಕ್ಕಳಿಗೆ ಹಗ್ಗ ಜಗ್ಗಾಟ ,ಬೆರಿ ಚೆಂಡು, ಓಟ ,ಬುಗರಿ ಓಟ, ಹಗ್ಗ ಜಗ್ಗಾಟ, ಕೆಸರುಗದ್ದೆ ಓಟ, ಬುಗರಿ ಓಟ ಹಾಗೂ ವೈಯಕ್ತಿಕ ಸ್ಪರ್ಧೆಗಳು ನಡೆಯಲಿರುವುದು. 45 ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರಿಗೆ ಕೆಸರುಗದ್ದೆ ಓಟವನ್ನು ಆಯೋಜಿಸಲಾಗುವುದು. ಅಮರ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟವರಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುವುದು. ಸ್ಪರ್ಧೆಗಳಿಗೆ ಯಾವುದೇ ರೀತಿಯ ಪ್ರವೇಶ ಶುಲ್ಕ ಇರುವುದಿಲ್ಲ. ಕ್ರೀಡಾಪಟುಗಳಿಗೆ ಸಾರ್ವಜನಿಕರಿಗೆ ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಮಾಡಲಾಗುವುದು. ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆಯು ನಡೆಯಲಿರುವುದು ಎಂದು ಸಂಘಟಕರು ತಿಳಿಸಿರುತ್ತಾರೆ.