ಅರಂಬೂರು ಅಂಬಿಕ ಮಹಿಳಾ ಮಂಡಲದಲ್ಲಿ ಆಟಿಯ ಗೌಜಿ ಕಾರ್ಯಕ್ರಮವು ಜು. 30ರಂದು ನಡೆಯಿತು.
ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಕುಡೆಕಲ್ಲು ಅಧ್ಯಕ್ಷತೆ ವಹಿಸಿದ್ದರು. ಆಟಿ ತಿಂಗಳ ಮಹತ್ವದ ಬಗ್ಗೆ ಆಟಿ ತಿಂಗಳಲ್ಲಿ ಸೇವಿಸುವ ಆಯುರ್ವೇದ ಔಷಧಗಳ ಬಗ್ಗೆ ಶ್ರೀಮತಿ ಪುಷ್ಪಾವತಿ, ಶ್ರೀಮತಿ ಪ್ರಫುಲ್ಲ ರೈ ಹಾಗೂ ಶ್ರೀಮತಿ ಹಾರಾವತಿ ಕೆ.ಸಿ.ಯವರು ವಿವರಿಸಿದರು.
ಮಹಿಳಾ ಮಂಡಲದ ಸದಸ್ಯರೆಲ್ಲರೂ ಆಟಿ ತಿಂಗಳಲ್ಲಿ ಮಾಡುವ ಅನೇಕ ಖಾದ್ಯಗಳನ್ನು ತಾವೇ ತಯಾರಿಸಿ ಮಹಿಳಾ ಮಂಡಲಕ್ಕೆ ತಂದು ಹಂಚಿದರು. ಶ್ರೀಮತಿ ಸತ್ಯಭಾಮ ಭಟ್ ಪ್ರಾರ್ಥಿಸಿದರು. ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಅಮಿತಾ ರೈ ಸ್ವಾಗತಿಸಿ, ಕಾರ್ಯದರ್ಶಿ ಶ್ರೀಮತಿ ವೇದಾವತಿ ವಂದಿಸಿದರು. ಖಜಾಂಜಿ ಶ್ರೀಮತಿ ಹಾರಾವತಿ ಕೆ. ಸಿ. ಕಾರ್ಯಕ್ರಮ ನಿರೂಪಿಸಿದರು.