ಸೆ.09 : ಬೆಳ್ಳಾರೆ ಝಕರಿಯಾ ಜುಮ್ಮಾ ಮಸೀದಿ ಆಡಳಿತ ಮಂಡಳಿಗೆ ಚುನಾವಣೆ

0

ಬೆಳ್ಳಾರೆ ಝಕಾರಿಯಾ ಜುಮ್ಮಾ ಮಸೀದಿಯ ಆಡಳಿತ ಮಂಡಳಿಗೆ ಸೆ.09 ರಂದು ಚುನಾವಣೆ ನಡೆಯಲಿದೆ.
ಮಸೀದಿಯ ಆಡಳಿತ ಮಂಡಳಿಯಲ್ಲಿ ವಿವಾದವಿದ್ದ ಕಾರಣ ಸುಮಾರು 3 ವರ್ಷಗಳಿಂದ ಮಸೀದಿಗೆ ಆಡಳಿತಾಧಿಕಾರಿ ನೇಮಕವಾಗಿತ್ತು.ಇದೀಗ ವಕ್ಫ್ ಮಂಡಳಿ ಆಡಳಿತ ಮಂಡಳಿ ರಚನೆಗೆ ಚುನಾವಣೆಯನ್ನು ಘೋಷಿಸಿದೆ.


ಚುನಾವಣೆಗೆ ನಾಮಪತ್ರ ಸಲ್ಲಿಸುವವರು ಆ.08 ರಿಂದ ಆ.17 ರವರೆಗೆ ಸಾರ್ವತ್ರಿಕ ರಜೆ ಹೊರತುಪಡಿಸಿ ಉಳಿದ ದಿನದಲ್ಲಿ ದ.ಕ.ಜಿಲ್ಲಾ ವಕ್ಫ್ ಕಚೇರಿ ಮಂಗಳೂರು ಇಲ್ಲಿ ನಾಮಪತ್ರ ಸಲ್ಲಿಸಬೇಕು.
ಆ.23 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.
ನಾಮಪತ್ರ ಹಿಂತೆಗೆದುಕೊಳ್ಳುವ ದಿನಾಂಕ ಆ.28 ಮತ್ತು ಆ.29.
ಚಿಹ್ನೆಗಳ ಹಂಚಿಕೆ ಆ.31 ರಂದು ನಡೆಯಲಿದೆ.
ಮತದಾನವು ಸೆ.09 ರಂದು ಬೆಳಿಗ್ಗೆ ಗಂಟೆ 8.00 ರಿಂದ ಅಪರಾಹ್ನ ಗಂಟೆ 3.00 ರವರೆಗೆ ಬೆಳ್ಳಾರೆ ಮಸೀದಿ ಆವರಣದ ಮದ್ರಸದ ಕಟ್ಟಡದಲ್ಲಿ ನಡೆಯಲಿದೆ.