ಗೂನಡ್ಕ ತೆಕ್ಕಿಲ್ ಆಂಗ್ಲ ಮಾಧ್ಯಮ ಶಾಲೆಗೆ ಮೀಫ್ ಅಚೀವ್ಮೆಂಟ್ ಅವಾರ್ಡ್

0

2022-23 ಎಸ್ಸೆಸ್ಸೆಲ್ಸಿಯಲ್ಲಿ 100% ಫಲಿತಾಂಶ ಪಡೆದ ಸುಳ್ಯ ತಾಲೂಕಿನ MEIF ಸದಸ್ಯತ್ವ ಹೊಂದಿರುವ ತೆಕ್ಕಿಲ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ಗೂನಡ್ಕ ಸುಮಾರು 100ಕ್ಕೂ ಹೆಚ್ಚು ಶಾಲೆಯ ಮುಖ್ಯಸ್ಥರು ಭಾಗವಹಿಸಿದ ಮಂಗಳೂರು ಪ್ರಿಸ್ಟೀಜ್ ಕಾಲೇಜಿನಲ್ಲಿ ನಡೆದ MEIF ANNUAL MEET & EXCELLENCE AWARD 2023 ನಲ್ಲಿ ಪ್ರಶಸ್ತಿ ಸ್ವೀಕರಿಸಿದೆ.

ಈ ಶಾಲೆ ಸತತ 5 ಬಾರಿ 100% ಫಲಿತಾಂಶ ಪಡೆದಿದೆ.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್, ರಾಜ್ಯ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ ಬೆಂಗಳೂರು ಇದರ ಕುಲಪತಿಗಳಾದ ಡಾ. ನಿಸಾರ್ ಅಹಮದ್ ಸಹಿತ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದರು. ಶಾಲೆಯ ಪ್ರತಿನಿಧಿಗಳಾಗಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಉನೈಸ್ ಪೆರಾಜೆ, ಸದಸ್ಯರಾದ ಸ್ವಾದಿಕ್ ಎಸ್ ಎ, ಶಾಲಾ ಮುಖ್ಯೋಪಾಧ್ಯಾಯರಾದ ಸಂಪತ್ ಜೆ ಡಿ, ಶಿಕ್ಷಕಿಯರಾದ ತಾಹಿರಾ, ಮೆಹಕ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.