ಬೆಳ್ಳಾರೆ ಪ್ರಸಾದ್ ಟೆಕ್ಸ್ಟ್ ಟೈಲ್ಸ್ ನಲ್ಲಿ ವಿಶೇಷ ಡಿಸ್ಕೌಂಟ್ ಸೇಲ್

0

ಗುಣಮಟ್ಟದಲ್ಲಿ ಶ್ರೇಷ್ಟತೆ ಮತ್ತು ಹಣದಲ್ಲಿ ಗರಿಷ್ಟ ಉಳಿತಾಯ ಎಂಬ ಧ್ಯೇಯದೊಂದಿಗೆ,
ಒಂದೇ ಸೂರಿನಡಿ ಖ್ಯಾತ ಕಂಪನಿಗಳ ಉತ್ಕೃಷ್ಟ ಗುಣಮಟ್ಟದ ಬೃಹತ್ ಮದುವೆ ಜವುಳಿ ಮಳಿಗೆಯೆಂದು ನಾಡಿನಾದ್ಯಂತ ಪ್ರಸಿದ್ಧಿ ಪಡೆದಿರುವ ಬೆಳ್ಳಾರೆಯ ಹೃದಯ ಭಾಗದಲ್ಲಿರುವ ಪ್ರಸಾದ್ ಟೆಕ್ಸ್ ಟೈಲ್ಸ್ ನಲ್ಲಿ ಮಳೆಕಾಲದ ಪ್ರಯುಕ್ತ ನೂತನ ಶೈಲಿಯ ಸೀರೆಗಳು ಮತ್ತು ಸಿದ್ಧ ಉಡುಪುಗಳ ಸಂಗ್ರಹಗಳೊಂದಿಗೆ ಅತೀ ಕಡಿಮೆ ಬೆಲೆಯ ಮಾರಾಟ ಆಗಸ್ಟ್ 7 ರಿಂದ ( ಕೆಲವೇ ದಿನಗಳು ಮಾತ್ರ ) ಪ್ರಾರಂಭಗೊಂಡಿದೆ.


1972 ರಲ್ಲಿ ಬಿ.ಶ್ಯಾಮ ಜೋಶಿಯವರಿಂದ ಸ್ಥಾಪನೆಗೊಂಡ ಜವುಳಿ ಮಳಿಗೆ ಇಂದು ಜನಾಶೀರ್ವಾದವೆಂಬ ಶ್ರೀ ರಕ್ಷೆಯಿಂದ ಗ್ರಾಹಕರ ಹೃದಾಯಾಂತರಾಳದ ಸ್ತೋತ್ರದಿಂದ ಐದು ದಶಕಗಳಲ್ಲಿ ಉತ್ಕೃಷ್ಟ ಗುಣಮಟ್ಟದ ಸೇವೆಯನ್ನು ನೀಡುತ್ತ ಜನಮನ ಗೆದ್ದಿದೆ.

ಈಗ ಸುವರ್ಣ ಮಹೋತ್ಸವ ಸಾಗಿ 52 ನೇ ವರ್ಷಕ್ಕೆ ಹೊಸತನದೊಂದಿಗೆ ಮುನ್ನಡೆಯುತ್ತಿದೆ. ಇಲ್ಲಿಗೆ ಸುಳ್ಯ ತಾಲೂಕಿನ ಗ್ರಾಹಕರು ಮಾತ್ರವಲ್ಲದೆ, ಹೊರ ತಾಲೂಕಿನವರೂ ಇಲ್ಲಿಗೆ ಬಂದು ಮದುವೆ ಜವುಳಿ ಖರೀದಿಸುತ್ತಿರುವುದು ಇಲ್ಲಿನ ವೈಶಿಷ್ಟವಾಗಿದೆ. ಮದುವೆ ಸೀರೆಗಳು, ರೇಷ್ಮೆ ಸೀರೆಗಳಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದ್ದು ಹೊಸ ವಿನ್ಯಾಸದ ಕಾಂಜೀವರಂ, ಧರ್ಮಾವರಂ ಮತ್ತು ಫ್ಯಾನ್ಸಿ ಸೀರೆಗಳ ಹೊಚ್ಚ ಹೊಸ ಸಂಗ್ರಹವಿದ್ದು, ಪುರುಷರ, ಮಹಿಳೆಯರ ಮತ್ತು ಮಕ್ಕಳ ಸಿದ್ಧ ಉಡುಪುಗಳ, ವೈವಿಧ್ಯಮಯ ಕಲೆಕ್ಷನ್ ಗಳು ಲಭ್ಯವಿದ್ದು, ಆಧುನಿಕ ವಿನ್ಯಾಸದ ಗೌನ್, ಕುರ್ತಿಗಳು, ಲೆಹೆಂಗಾ, ಮಿಡಿ, ಫ್ರಾಕ್ಸ್, ಬಾಬಾ ಸೂಟ್ ಮತ್ತು ಬ್ರಾಂಡೆಡ್ ಡ್ರೆಸ್ಸುಗಳು ಆಯ್ಕೆಗೆ ಲಭ್ಯವಿರುತ್ತದೆ. ಪ್ರಖ್ಯಾತ ಮಿಲ್ಲುಗಳ ಸೂಟಿಂಗ್ಸ್, ಶರ್ಟಿಂಗ್, ರಾಮರಾಜ್, ಉದಯಮ್, ರೇಮಂಡ್ಸ್, ಸಿಯಾರಾಮ್ಸ್, ಪೋಪಿ, ಸಿರಿ ಮೊದಲಾದ ಕಂಪನಿಗಳ ಅಧಿಕೃತ ಡೀಲರ್ ಆಗಿರುತ್ತಾರೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯೊಂದಿಗೆ ಉತ್ತಮ ಜನಮನ್ನಣೆ ಪಡೆದ ಸಂಸ್ಥೆಯಾಗಿದ್ದು, ಗ್ರಾಹಕರಿಗೆ ವಿಶೇಷ ಕೃತಜ್ಞತೆ ಸಲ್ಲಿಸುತ್ತಾ ಈ ಸಂದರ್ಭದಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡುತ್ತಿರುವುದಾಗಿ ಸಂಸ್ಥೆಯ ಮಾಲಕರಾದ ಬಿ.ನರಸಿಂಹ ಜೋಶಿ ತಿಳಿಸಿರುತ್ತಾರೆ.