ದ.ಕ. ಜಿಲ್ಲಾ ಗೃಹರಕ್ಷಕದಳ ಬೆಳ್ಳಾರೆ ಘಟಕ ಮತ್ತು ಜೇಸಿಐ ಬೆಳ್ಳಾರೆ ಇದರ ಆಶ್ರಯದಲ್ಲಿ ಜು. 25ರಂದು ನಿಧನರಾದ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಹೂವಪ್ಪ ಗೌಡ ಕಣ್ಕಲ್ ರವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಆ. 6ರಂದು ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ಸಭಾ ಭವನದಲ್ಲಿ ನಡೆಯಿತು.
ದ.ಕ. ಜಿಲ್ಲಾ ಗೃಹರಕ್ಷಕದಳದಜಿಲ್ಲಾ ಸಮಾಧೇಷ್ಟರಾದ ಡಾ. ಮುರಲಿಮೋಹನ್ ಚೂಂತಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಬೆಳ್ಳಾರೆ ಘಟಕದ ಘಟಕಾಧಿಕಾರಿ ವಸಂತಕುಮಾರ್ ಮಾತನಾಡಿ ಸಮಾಜದಲ್ಲಿ ಯಾರಿಗೆ ಏನೇ ಕಷ್ಟ ಬಂದರೂ ತಕ್ಷಣ ತನ್ನಿಂದಾದ ಸಹಾಯವನ್ನು ಮಾಡುತ್ತಿದ್ದ ಪರೋಪಕಾರಿ ವ್ಯಕ್ತಿ ಹೂವಪ್ಪ ಗೌಡರು ಎಂದು ಹೇಳಿದರು.
ಬೆಳ್ಳಾರೆ ಜೇಸಿಐ ಘಟಕಾಧ್ಯಕ್ಷ ರವೀಂದ್ರನಾಥ ಶೆಟ್ಟಿ ಮಾತನಾಡಿ ಬೆಳ್ಳಾರೆಯಲ್ಲಿ ನಡೆಯುತ್ತಿದ್ದ ಯಾವುದೇ ಕಾರ್ಯಕ್ರಮಗಳಲ್ಲಿ ಬಂದೋಬಸ್ತು ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು ಎಂದರು. ಬೆಳ್ಳಾರೆ ಠಾಣಾ ಎಸ್.ಐ. ಸುಹಾಸ್ ಮಾತನಾಡಿ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಹೋಮ್ ಗಾರ್ಡ್ಸ್ ಗಳಲ್ಲಿ ಹೂವಪ್ಪರು ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ ಎಂದರು. ಹೂವಪ್ಪ ಗೌಡರ ಪುತ್ರ ಸಚಿನ್ ಕಣ್ಕಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸುತ್ತಾ ಹೂವಪ್ಪರನ್ನು ಬೆಳ್ಳಾರೆಯ ಜನತೆ ಎಂದೂ ಮರೆಯಲಾರರು. ಯಾವುದೇ ಬಂದೋಬಸ್ತನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದರಲ್ಲದೆ ಜನರಿಗೆ ತೊಂದರೆ ಕೊಡುವ ವಿಷದ ಹಾವುಗಳನ್ನು ಹಿಡಿಯುವುದು
ಯಾವುದೇ ತುರ್ತು ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಗ್ರಹರಕ್ಷಕರು ಸದಾ ಸಿದ್ಧರಿರುತ್ತಾರೆ. ಅಂತಹವರಲ್ಲಿ ಹೂವಪ್ಪ ಕಣ್ಕಲ್ ರವರು ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ಸತ್ತಮೇಲೂ ಮನುಷ್ಯ ಬದುಕಿರುತ್ತಾರೆ. ಅಂತವರಲ್ಲಿ ಹೂವಪ್ಪರು ಒಬ್ಬರು. ಅವರ ಕಾರ್ಯದಕ್ಷತೆ, ಸಮಾಜಿಕ ಬದ್ದತೆ ಇಡೀ ಸಮಾಜಕ್ಕೆ ಮಾದರಿ. ಹೋಮ್ ಗಾರ್ಡ್ಸ್ ಎಂಬ ಶಬ್ದಕ್ಕೆ ಪರ್ಯಾಯವಾಗಿ ಕರ್ತವ್ಯ ನಿರ್ವಹಿಸಿದ್ದಾರೆ – ಡಾ. ಮುರಲಿಮೋಹನ್ ಚೂಂತಾರು
ಸಭೆಯಲ್ಲಿದ್ದ ದಿ. ಹೂವಪ್ಪ ಕಣ್ಕಲ್ ರ ಪುತ್ರ ಸುಳ್ಯ ಮೆಸ್ಕಾಂ ಉದ್ಯೋಗಿ ಸಚಿನ್ ಕಣ್ಕಲ್ ಮಾತನಾಡಿ ಕಡಬ ತಾಲೂಕಿನಲ್ಲಿ ಮುಖ್ಯ ಮಂತ್ರಿ ಚಿನ್ನದ ಪದಕ ಪಡೆದ ಮೊದಲಿಗರಾದ ತಂದೆಯವರ ನೆನಪಿಗಾಗಿ ಸರಕಾರಿ ಶಾಲೆಯ 5 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ, ಹೋಮ್ ಗಾರ್ಡ್ ಸಿಬ್ಬಂದಿಗಳ 2 ಮಕ್ಕಳಿಗೆ ಪ್ರತಿ ವರ್ಷ ವಿದ್ಯಾರ್ಥಿ ವೇತನ ಮತ್ತು ಹೋಮ್ ಗಾರ್ಡ್ಸ್ ಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಓರ್ವ ಸಿಬ್ಬಂದಿಗೆ ಹೂವಪ್ಪ ಕಣ್ಕಲ್ ಪ್ರಶಸ್ತಿ ನೀಡುವ ಉದ್ದೇಶದಿಂದ ಅದಕ್ಕೆ ಬೇಕಾದ ನಿಧಿಯನ್ನು ನೀಡುವುದಾಗಿ ಹೇಳಿದರು.