ಮಡಪ್ಪಾಡಿ : ಡ್ಯಾನ್ಸ್ ತರಬೇತಿ ಕಾರ್ಯಕ್ರಮ

0

ಮಡಪ್ಪಾಡಿ ಯುವಕ ಮಂಡಲದ ಆಶ್ರಯದಲ್ಲಿ ಮಂಜು ಬ್ರದರ್ಸ್ ಸುಳ್ಯ ತಂಡದ ಡ್ಯಾನ್ಸ್ ತರಬೇತಿ ಕಾರ್ಯಕ್ರಮವು ಯುವಕ ಮಂಡಲ ಸಭಾಭವನ ಮಡಪ್ಪಾಡಿಯಲ್ಲಿ ಆ.6ರಂದು ಆರಂಭಗೊಂಡಿತು.


ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಯುವಕ‌ ಮಂಡಲದ ಅಧ್ಯಕ್ಷ ಧನ್ಯಕುಮಾರ್ ದೇರುಮಜಲು ವಹಿಸಿದ್ದರು. ತರಬೇತಿ ಕಾರ್ಯಕ್ರಮವನ್ನು ಮಡಪ್ಪಾಡಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧರ್ಮಪಾಲ ತಳೂರು ಉದ್ಘಾಟಿಸಿದರು. ವೇದಿಕೆಯಲ್ಲಿ ಯುವಕ ಮಂಡಲದ ಪೂರ್ವ ಅಧ್ಯಕ್ಷರಾದ ಯತೀಶ್ ಗೋಳ್ಯಾಡಿ, ಮಡಪ್ಪಾಡಿ ಶಾಲಾಭಿವೃದ್ಧಿಯ ಅಧ್ಯಕ್ಷರಾದ ಸಚಿನ್ ಬಳ್ಳಡ್ಕ , ಮಂಜು ಬ್ರದರ್ಸ್ ತಂಡದ ಮಂಜುನಾಥ ರವರು ಉಪಸ್ಥಿತರಿದ್ದರು. ಸುಮಾರು 65 ಮಕ್ಕಳು ಈ ತರಬೇತಿ ಕಾರ್ಯಕ್ರಮದ ಪ್ರಯೋಜನ ಪಡೆಯಲಿದ್ದಾರೆ. ಸಚಿನ್ ಬಳ್ಳಡ್ಕ ಕಾರ್ಯಕ್ರಮ ನಿರೂಪಿಸಿದರು. ಲೋಹಿತ್ ಬಾಳಿಕಳ ಸ್ವಾಗತಿಸಿದರು. ಸದಾನಂದ ಬಲ್ಕಜೆ ವಂದಿಸಿದರು. ಚೇತನ್ ಕುಚ್ಚಾಲ ಸಹಕರಿಸಿದರು.