ಪೈಚಾರು :ಮಾದಕ ವ್ಯಸನಗಳಿಂದ ದೂರ ಸರಿಯಿರಿ” ಅಭಿಯಾನ ಕಾರ್ಯಕ್ರಮ, ಪೋಸ್ಟರ್ ಬಿಡುಗಡೆ

0

ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಪೈಚಾರು ಸಂಘಟನೆಯ ವತಿಯಿಂದ ಮಾದಕ ವಸ್ತುಗಳ ಜಾಗೃತಿ ಕುರಿತ ಕಾರ್ಯಕ್ರಮದ ಅಂಗವಾಗಿ ‘ಮಾದಕ ವ್ಯಸನ ಗಳಿಂದ ದೂರ ಸರಿಯಿರಿ’ ಎಂಬ ಅಭಿಯಾನ ಮತ್ತು ಜಾಗೃತಿ ಅಭಿಯಾನದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಆಗಸ್ಟ್ 6 ರಂದು ನಡೆಯಿತು.


ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರ್ ಪೋಸ್ಟರ್ ಬಿಡುಗಡೆಮಾಡಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಅಭಿಯಾನದ ಬಗ್ಗೆ ಮಾತನಾಡಿರುವ ಸಂಘಟನೆಯ ಮುಖ್ಯಸ್ಥರು ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಕಳೆದ 25 ವರ್ಷಗಳಿಂದ ಹಲವಾರು ಸಮಾಜಿಕ, ಶೈಕ್ಷಣಿಕ ಹಾಗೂ ಕ್ರೀಡೆ ಮುಂತಾದ ಹಲವಾರು ಕಾರ್ಯಕ್ರಮ ನಡೆಸಿಕ್ಕೊಂಡು ಬರುತ್ತಿದ್ದು,
ಇದೀಗ ದೇಶದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಮಾದಕ ದ್ರವ್ಯ ಸೇವನೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಕೆಲವು ಕುಟುಂಬಗಳ ಮೇಲೆ ಗಣನೀಯ ಪ್ರಭಾವವನ್ನು ಉಂಟು ಮಾಡುತ್ತಿದೆ.


ಮಾದಕ ದೃವ್ಯ ಸೇವನೆಯಿಂದ ಜೀವನ ನಾಶವಾಗುತ್ತದೆ. ಚಿಕ್ಕ ವಯಸ್ಸಿನಲ್ಲೇ ವಿಧ್ಯಾರ್ಥಿಗಳು ಕೆಟ್ಟ ಚಟುವಟಿಕೆಗಳಿಗೆ ಬಲಿಯಾಗದೆ ಸದೃಢ ಭವಿಷ್ಯದ ಬಗ್ಗೆ ಗಮನಹರಿಸುವ ಪರವಾಗಿ ಜಾಗೃತಿ ಮೂಡಿಸಲು ಕ್ಲಬ್ ವತಿಯಿಂದ ಮಾದಕ ವ್ಯಸನಗಳಿಂದ ದೂರ ಸರಿಯಿರಿ ಎಂಬ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ರಿಫಾಯಿ ಎಸ್.ಎ. ಕಾರ್ಯದರ್ಶಿ ಸಾಲಿ ಪೈಚಾರ್ ನಾಸಿರ್ ಕೆ.ಪಿ, ಸಿರಾಜ್ ಎಸ್.ಪಿ, ಬಾತಿಶಾ ಬಿ.ಎಮ್ ಮೊದಲಾದವರು ಉಪಸ್ಥಿತರಿದ್ದರು.